ಕೂಡಿಗೆ, ಜು. ೨೨: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಕೂಡುಮಂಗಳೂರು-೧ (ಕೂಡ್ಲೂರು) ಕ್ಷೇತ್ರದ ಮರು ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೆ.ಹೆಚ್. ಮಹೇಶ್ ಕುಮಾರ್ ಅವರ ಪರವಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಮತಯಾಚನೆ ನಡೆಯಿತು.

ಪಂಚಾಯಿತಿಯ ಮಾಜಿ ಅಧ್ಯಕ್ಷ ಕೆ.ಕೆ. ಬೋಗಪ್ಪ, ವಾಂಚೀರ ಮನು ನಂಜುAಡ, ಮಂಡಲ ಉಪಾಧ್ಯಕ್ಷ ಕೆ. ವರದ, ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ್, ಶಕ್ತಿ ಕೇಂದ್ರ ಪ್ರಮುಖ ಮಂಜುನಾಥ ಕೆ.ಜಿ., ಕೂಡ್ಲೂರು ಬೂತ್ ಅಧ್ಯಕ್ಷ ನಟ, ಪ್ರಮುಖರಾದ ನವೀನ್, ಮಂಜು, ವಿಜಯ್, ಹುಚ್ಚಪ್ಪ ಸೇರಿದಂತೆ ವಿವಿಧ ಘಟಕ ಪದಾಧಿಕಾರಿಗಳು ಕೂಡ್ಲೂರು, ನವಗ್ರಾಮ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿದರು.