ಸೋಮವಾರಪೇಟೆ, ಜು. ೨೨: ಸೋಮವಾರಪೇಟೆ ತಾಲೂಕಿನಾದ್ಯಂತ ಮಳೆಯ ಆರ್ಭಟ ಜೋರಾಗಿದ್ದು, ವಾಯು-ವರುಣನ ರಭಸಕ್ಕೆ ಅಲ್ಲಲ್ಲಿ ಹಾನಿಗಳು ಸಂಭವಿಸುತ್ತಿವೆ. ವಾಸದ ಮನೆಗಳ ಮೇಲೆ ಮರಗಳು ಬಿದ್ದು, ನಷ್ಟವಾಗುತ್ತಿದ್ದರೆ, ತಡೆಗೋಡೆ, ಬರೆಕುಸಿತದಂತಹ ಘಟನೆಗಳು ನಡೆಯುತ್ತಿವೆ.

ವಿದ್ಯುತ್ ಮಾರ್ಗದ ಮೇಲೆ ಮರಗಳು ಬಿದ್ದು, ವಿದ್ಯುತ್ ಸ್ಥಗಿತಗೊಳ್ಳುತ್ತಿದ್ದು, ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಕೆಲ ಗ್ರಾಮಗಳು ಕಳೆದೆರಡು ದಿನಗಳಿಂದ ಕತ್ತಲೆಯಲ್ಲಿವೆ.

ಭಾರೀ ಮಳೆಯಿಂದಾಗಿ ಪಟ್ಟಣ ಸಮೀಪದ ಹಾನಗಲ್ಲು ಗ್ರಾ.ಪಂ. ವ್ಯಾಪ್ತಿಯ ಹಾನಗಲ್ಲು ಬಾಣೆ ಗ್ರಾಮದ ಲೀಲಾ ಕೃಷ್ಣಪ್ಪ ಅವರ ವಾಸದ ಮನೆಯ ಒಂದು ಪಾರ್ಶ್ವ ಕುಸಿದು ಬಿದ್ದಿದೆ. ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹಾನಗಲ್ಲುಶೆಟ್ಟಳ್ಳಿ ಗ್ರಾಮದ ಎಲ್.ಎಂ. ಪ್ರಸನ್ನ ಅವರಿಗೆ ಸೇರಿದ ವಾಸದ ಮನೆಯ ಗೋಡೆ ಮಳೆಗಾಳಿಗೆ ಕುಸಿದು ಬಿದ್ದಿದೆ. ಶಾಂತಳ್ಳಿ ಹೋಬಳಿ ತೋಳೂರುಶೆಟ್ಟಳ್ಳಿ ಗ್ರಾಮದ ಪಾರ್ವತಿ ಜಯಪ್ಪ ಅವರಿಗೆ ಸೇರಿದ ವಾಸದ ಮನೆಯ ಮೇಲೆ ಮರ ಬಿದ್ದು, ಛಾವಣಿ ಜಖಂಗೊAಡಿದೆ. ಜಂಬೂರು ಗ್ರಾಮದ ಶೋಭಾ ಕುಮಾರ ಅವರ ಮನೆಯ ಪಕ್ಕದ ಬರೆ ಕುಸಿದಿದ್ದು, ಮಣ್ಣಿನೊಂದಿಗೆ ಕಲ್ಲುಬಂಡೆಗಳು ಕೆಳಗೆ ಜಾರಿವೆ. ಅದೃಷ್ಟವಶಾತ್ ಹೆಚ್ಚಿನ ಹಾನಿ ಸಂಭವಿಸಿಲ್ಲ. ಕುಂಬೂರು ಗ್ರಾಮದ ಯೋಗಾನಂದ ಸಾಯಿ ಅವರಿಗೆ ಸೇರಿದ ವಾಸದ ಮನೆಯ ಹಿಂಭಾಗ ಬರೆ ಕುಸಿದಿದ್ದು,

(ಮೊದಲ ಪುಟ ದಿಂದ) ಮನೆಗೆ ಹಾನಿ ಸಂಭವಿಸಿದೆ. ಮನೆಯ ಹಿಂಭಾಗದ ಛಾವಣಿ ಜಖಂಗೊAಡಿದೆ.

ಶನಿವಾರಸAತೆ ಹೋಬಳಿಯ ಮಾಲಂಬಿ ಗ್ರಾಮದ ಸರೋಜ ಅಯ್ಯಪ್ಪ ಅವರಿಗೆ ಸೇರಿದ ಮನೆಯ ಗೋಡೆ ಅತೀ ಶೀತಕ್ಕೆ ಕುಸಿದಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮಕ್ಕಾಗಿ ತಾಲೂಕು ಆಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.

ಕೊಡ್ಲಿಪೇಟೆ ಹೋಬ ಳಿಯ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕುಂದ ಗ್ರಾಮದ ಅಬ್ಬಾಸ್ ಹೆಚ್.ಐ. ಅವರ ವಾಸದ ಮನೆಯ ತಡೆಗೋಡೆ ಅತೀ ಮಳೆಗೆ ಕುಸಿದು ಬಿದ್ದಿದೆ. ೨ ಲಕ್ಷ ವ್ಯಯಮಾಡಿ ನಿರ್ಮಿಸಿದ್ದ ತಡೆಗೋಡೆ ಕುಸಿದು ಬಿದ್ದಿದ್ದು, ಮಳೆ ಹೀಗೇ ಮುಂದುವರೆದರೆ ವಾಸದ ಮನೆಗೂ ಅಪಾಯ ಎದುರಾಗಲಿದೆ ಎಂದು ಅಬ್ಬಾಸ್ ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾ ರಿಗಳು, ಗ್ರಾಮ ಪಂಚಾ ಯಿತಿ ಸದಸ್ಯರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಸದ ಮನೆಗೆ ಅಪಾಯ ಎದುರಾಗಿರುವುದರಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ತಡೆಗೋಡೆ ನಿರ್ಮಿಸಲು ಜಿಲ್ಲಾಡಳಿತ ಕ್ರಮ ವಹಿಸಬೇಕೆಂದು ಗ್ರಾ.ಪಂ. ಸದಸ್ಯ ಹನೀಫ್, ಮಾಜಿ ಸದಸ್ಯ ಡಿ.ಆರ್. ವೇದಕುಮಾರ್ ಆಗ್ರಹಿಸಿದ್ದಾರೆ.

ಕತ್ತಲಲ್ಲಿ ಗ್ರಾಮಗಳು: ಭಾರೀ ಮಳೆಯೊಂದಿಗೆ ಗಾಳಿಯ ರಭಸವೂ ಹೆಚ್ಚಿದ್ದು, ವಿದ್ಯುತ್ ತಂತಿ ಗಳ ಮೇಲೆ ಮರಬಿದ್ದು ವಿದ್ಯುತ್ ಸ್ಥಗಿತಗೊಳ್ಳು ತ್ತಿದೆ. ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಹಲವಷ್ಟು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸೋಮವಾರಪೇಟೆಯಿಂದ ಕೂತಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ೧೧ ಕೆ.ವಿ. ವಿದ್ಯುತ್ ಮಾರ್ಗದ ಮೇಲೆ ಒಣಗಿದ ಮರ ಬಿದ್ದಿರುವುದರಿಂದ ಕೂತಿ, ತೋಳುರುಶೆಟ್ಟಳ್ಳಿ, ಹೊಸಬೀಡು, ನಗರಳ್ಳಿ, ಕಲ್ಕಂದೂರು, ಶಾಂತಳ್ಳಿ, ಕುಂದಳ್ಳಿ ಹೆಗ್ಗಡಮನೆ, ಪುಷ್ಪಗಿರಿ ಸೇರಿದಂತೆ ಇತರ ಗ್ರಾಮಗಳಿಗೆ ವಿದ್ಯುತ್ ಸ್ಥಗಿತಗೊಂಡಿದ್ದು, ಕತ್ತಲೆಯಲ್ಲಿ ರಾತ್ರಿ ಕಳೆಯುವಂತಾಗಿದೆ. -ವಿಜಯ್