ಸೋಮವಾರಪೇಟೆ, ಜು.೨೩: ಭಾರೀ ಗಾಳಿ ಮಳೆಗೆ ತಾಲೂಕಿನ ಪ್ರಸಿದ್ದ ಪ್ರವಾಸಿ ತಾಣವಾದ ಮಲ್ಲಳ್ಳಿ ಜಲಪಾತ ಹಾಗೂ ಹಟ್ಟಿಹೊಳೆ ಸಮೀಪದ ಹೊದಕಾನ ಶ್ರೀ ಭದ್ರಕಾಳಿ ದೇವಾಲಯದ ರಸ್ತೆಗಳು ಜಲಾವೃತವಾಗಿವೆ.
ಮಲ್ಲಳ್ಳಿ ಜಲಪಾತಕ್ಕೆ ತೆರಳುವ ಕುಮಾರಳ್ಳಿಬಾಚಳ್ಳಿ ಗ್ರಾಮದ ಹೊಳೆ ತುಂಬಿಹರಿದ ಪರಿಣಾಮ ರಸ್ತೆಯ ಮೇಲೆ ೨ ಅಡಿಗಳಷ್ಟು ನೀರು ಹರಿಯುತ್ತಿದ್ದುದರಿಂದ ಸಣ್ಣಪುಟ್ಟ ವಾಹನಗಳ ಓಡಾಟಕ್ಕೆ ತಡೆಯಾಗಿತ್ತು. ಅಂತೆಯೇ ಹಟ್ಟಿಹೊಳೆ - ಮುಕ್ಕೋಡ್ಲು ಗ್ರಾಮದ ಮುಖ್ಯರಸ್ತೆಗೆ ಒತ್ತಿಕೊಂಡAತೆ ಹರಿಯುತ್ತಿರುವ ಹಟ್ಟಿಹೊಳೆ ತುಂಬಿದ ಪರಿಣಾಮ ಹೊದಕಾನ ಶ್ರೀ ಭದ್ರಕಾಳಿ ದೇವಾಲಯದ ರಸ್ತೆ ಹಾಗು ಸೇತುವೆ ಮುಳುಗಿದ್ದು, ಆಚೆಬದಿಗಿನ ಸಂಪರ್ಕ ಕಡಿತಗೊಂಡಿದೆ.