ಕೂಡಿಗೆ, ಜು: ೨೨: ತೊರೆನೂರು ಗ್ರಾಮದಲ್ಲಿ ನೂತನವಾಗಿ ನಬಾರ್ಡ್ ಪ್ರಾಯೋಜಕತ್ವದಲ್ಲಿ ೭೦ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಜನಸಾಮಾನ್ಯರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಹೆಚ್ಚು ಸದಸ್ಯತ್ವ ಹೊಂದುವ ಮೂಲಕ ಸಂಘದ ಬೆಳವಣಿಗೆಗೆ ಶ್ರಮಿಸಬೇಕು ಎಂದರು.

ನೂತನ ಗೋದಾಮು ಉದ್ಘಾಟಿಸಿದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ ಗಣಪತಿ ಮಾತನಾಡಿ, ಸಹಕಾರ ಸಂಘದ ಸದಸ್ಯರಿಗೆ ಅನುಕೂಲ ಒದಗಿಸುವ ಬದ್ಧತೆ ಸಹಕಾರ ಸಂಘದ ಆಡಳಿತ ಮಂಡಳಿಗೆ ಇರಬೇಕು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕೂಡ ನಬಾರ್ಡ್ ಪ್ರಾಯೋಜಕತ್ವದಲ್ಲಿ ಹಲವು ಸಂಘಗಳಿಗೆ ಸಭಾಂಗಣ ನಿರ್ಮಾಣಕ್ಕೆ ಸಹಕಾರ ಒದಗಿಸಿದೆ ಎಂದರು. ಹಿಂದಿನ ಸರಕಾರದ ಸಾಲ ಮನ್ನಾದ ಹಣ ಇದುವರೆಗೂ ಬಿಡುಗಡೆ ಆಗಿಲ್ಲ. ಜಿಲ್ಲೆಯ ಸಹಕಾರ ಸಂಘಗಳಿಗೆ ಸೇರಿದಂತೆ ಕೇಂದ್ರ ಬ್ಯಾಂಕ್‌ಗೆ ೧೧ ಕೋಟಿ ರೂ. ಹಣ ಬರಬೇಕಾಗಿದೆ. ಈ ಹಣವನ್ನು ರಾಜ್ಯ ಸಹಕಾರ ಇಲಾಖೆಯ ಮೂಲಕ ಬಿಡುಗಡೆಗೊಳಿಸಲು ಶಾಸಕರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.

ಜಿ.ಪಂ. ಮಾಜಿ ಸದಸ್ಯ ವಿ.ಪಿ. ಶಶಿಧರ್, ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಬಿ.ಕೆ. ಚಿಣ್ಣಪ್ಪ, ಎಸ್.ಬಿ. ಭರತ್ ಕುಮಾರ್, ತೊರೆನೂರು ಗ್ರಾ.ಪಂ. ಅಧ್ಯಕ್ಷೆ ರೂಪಾ ಮಹೇಶ್ ಮಾತನಾಡಿದರು.

ಸಂಘದ ನಿರ್ದೇಶಕ ಟಿ.ಕೆ. ಪಾಂಡುರAಗ ಸಂಘದ ವಾರ್ಷಿಕ ವರದಿ ವಾಚಿಸಿದರು.ನೂತನ ಶಾಸಕರು, ಗುತ್ತಿಗೆದಾರರು, ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳು, ಸಿಬ್ಬಂದಿ ಹಾಗೂ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಹಕಾರ ಸಂಘದ ಅಧ್ಯಕ್ಷ ಎಚ್.ಟಿ.ಕುಶಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕಿ ಜಲಜ ಶೇಖರ್, ಸಹಕಾರ ಸಂಘದ ಸಹಾಯಕ ನಿಬಂಧಕ ಎಂ.ಇ. ಮೋಹನ್, ಶಿರಂಗಾಲ ಸಹಕಾರ ಸಂಘದ ಅಧ್ಯಕ್ಷ ಧರ್ಮಪ್ಪ, ಹೆಬ್ಬಾಲೆ ಸಹಕಾರ ಸಂಘದ ಅಧ್ಯಕ್ಷ ಎಂ.ಎA. ಮಹದೇವ್, ಕೆಡಿಸಿಸಿ ಬ್ಯಾಂಕ್ ಹೆಬ್ಬಾಲೆ ಕೇಂದ್ರದ ವ್ಯವಸ್ಥಾಪಕ ತುಂಗರಾಜ್, ತೊರೆನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ವೀಣಾ, ತೊರೆನೂರು ಸಹಕಾರ ಸಂಘದ ಉಪಾಧ್ಯಕ್ಷೆ ಲಲಿತಾ, ನಿರ್ದೇಶಕರಾದ ಟಿ.ಕೆ.ಕುಮಾರ್, ಕೆ.ಎಸ್.ಕೃಷ್ಣೇಗೌಡ, ಎಚ್.ಬಿ.ಚಂದ್ರಪ್ಪ, ಟಿ.ಪಿ.ಪ್ರಸನ್ನ, ಡಿ.ಆರ್. ಪ್ರೇಮ್ ಕುಮಾರ್, ಎಚ್.ಆರ್. ಭಾಗ್ಯ, ಟಿ.ಜಿ. ಲೋಕೇಶ್, ಟಿ.ಸಿ. ಶಿವಕುಮಾರ್, ಟಿ.ಜಿ. ಶ್ರೀನಿವಾಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತು ಪ್ರಸಾದ್ ಮತ್ತಿತರರು ಇದ್ದರು.