ಗೋಣಿಕೊಪ್ಪಲು, ಜು. ೨೩: ಸರ್ಕಾರದ ಮಹತ್ವಾ ಕಾಂಕ್ಷೆಯ ಯೋಜನೆಯಲ್ಲಿ ಒಂದಾಗಿರುವ ಗೃಹಲಕ್ಷಿö್ಮ ಯೋಜನೆ ಜಾರಿಯಾಗಿದ್ದು ೩ ದಿನಗಳು ಕಳೆದಿವೆ. ಈ ನಿಟ್ಟಿನಲ್ಲಿ ಸೇವಾ ಕೇಂದ್ರಗಳು ನಾಗರಿಕರಿಗೆ ನೀಡುತ್ತಿರುವ ಸೇವೆಯ ಬಗ್ಗೆ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ಅವರು ಖುದ್ದು ಭೇಟಿ ನೀಡಿ ವಸ್ತುಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿ, ಅಗತ್ಯ ಸಲಹೆ ನೀಡಿದರು.

ಸೇವಾ ಸಿಂಧು ಕೇಂದ್ರಗಳಲ್ಲಿ ಇರುವ ನಾಗರಿಕರಿಂದ ಹಾಗೂ ಕೇಂದ್ರದ ಮಾಲೀಕರಿಂದ ಮಾಹಿತಿ ಪಡೆದರು. ಕೇಂದ್ರಗಳಲ್ಲಿ ಕಾಣಿಸಿಕೊಂಡ ಸರ್ವರ್ ಸಮಸ್ಯೆಗೆ ತಹಶೀಲ್ದಾರ್ ಸಂಬAಧಿಸಿದವರಿಗೆ ಸೂಚನೆ ನೀಡಿ ಸಮಸ್ಯೆಗೆ ಪರಿಹಾರ ಒದಗಿಸಿದರು.

ಯೋಜನೆಯ ಲಾಭ ಪಡೆಯಲು ನಾಗರಿಕರು ಸರ್ಕಾರದ ನಿಯಮಗಳನ್ನು ಪಾಲಿಸುವಂತೆಯೂ ಈ ವಿಷಯದಲ್ಲಿ ಯಾರು ಕೂಡ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಅರ್ಹತೆ ಇರುವವರಿಗೆ ಯೋಜನೆಯ ಫಲ ದೊರೆಯಲಿದೆ ಎಂದು ನಾಗರಿಕರಿಗೆ ಮನವಿ ಮಾಡಿದರು.

ಶುಕ್ರವಾರ ಸಂಜೆಯ ವೇಳೆಗೆ ಪೊನ್ನಂಪೇಟೆ ತಾಲೂಕಿನ ಬಾಪೂಜಿ ಸೇವಾ ಕೇಂದ್ರದಲ್ಲಿ ೩೩೯ ಗ್ರಾಮ ೧ ಕೇಂದ್ರದಲ್ಲಿ ೨೩೩ ಪಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ ಎಂದು ತಹಶೀಲ್ದಾರ್ ಪ್ರಶಾಂತ್ ಮಾಹಿತಿ ಒದಗಿಸಿದರು.

ಸೇವಾ ಕೇಂದ್ರಗಳಲ್ಲಿ ಅರ್ಜಿದಾರರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಭೇಟಿಯ ವೇಳೆ ಕಂದಾಯ ಪರಿವೀಕ್ಷಕ ಮಹೇಶ್, ಸಿಬ್ಬಂದಿ ಚಂದ್ರ ಹಾಜರಿದ್ದರು.