ಕಡAಗ, ಜು. ೨೨: ವೀರಾಜಪೇಟೆ ಜಮಿಯತುಲ್ ಅಲ್ಲಿ ಮುಹಲ್ಲಿಮೀನ್ ರೇಂಜ್ ಮಟ್ಟದ ಮುಹಲಿಮಿನ್ ಡೇ ಉದ್ಘಾಟನಾ ಸಮಾರಂಭವನ್ನು ಕಡಂಗ ಶಾದಿಮಹಲ್ ಸಭಾಂಗಣದಲ್ಲಿ ನಡೆಸಲಾಯಿತು.
ಜಮಾಅತ್ ಅಧ್ಯಕ್ಷ ಅಬುಲ್ಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಅಬೂಬಕರ್ ಮುಸ್ಲಿಯಾರ್ ನೆರವೇರಿಸಿದರು. ಸಮಾರಂಭದ ಉದ್ಘಾಟನೆಯನ್ನು ಸಿಪಿಎಂ ಬಷೀರ್ ಹಾಜಿ ವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ವೀರಾಜಪೇಟೆ ಖತೀಬ್ ಉಸ್ತಾದ್ ರಹ್ಹೋಫ್ ಹುದವಿ ನೆರವೇರಿಸಿದರು.
ಕಾರ್ಯಕ್ರಮದ ಅತಿಥಿಗಳಾಗಿ ಇಸ್ಮಾಯಿಲ್ ಉಸ್ತಾದ್, ಅಹ್ಮದ್ ಹಾಜಿ, ಯೋಸೋಪ್ ಉಸ್ತಾದ್, ಸುಹೈಬ್ ಫೈಜಿ, ಸಲಾಂ, ಅಬ್ದುಲ್ಲ ಹಾಜಿ ಭಾಗವಹಿಸಿದ್ದರು. ಸ್ವಾಗತ ಮತ್ತು ವಂದನೆಯನ್ನು ಹನೀಫ್ ಫೈಜಿ ನಿರ್ವಹಿಸಿದರು.