ಕೋವರ್ಕೊಲ್ಲಿ ಇಂದ್ರೇಶ್
ಬೆAಗಳೂರು, ಜು. ೨೨: ರಾಜಧಾನಿಯಲ್ಲಿ ದೊಡ್ಡ ಮಟ್ಟದ ನರಮೇಧಕ್ಕೆ ಮುಂದಾಗಿದ್ದ ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಇವರನ್ನು ಸಕಾಲದಲ್ಲಿ ಬಂಧಿಸದಿದ್ದರೆ ಆಗುತ್ತಿದ್ದ ಅನಾಹುತ, ಪ್ರಾಣಹಾನಿ ದೊಡ್ಡದಾಗೇ ಇರುತಿತ್ತು ಎನ್ನಲಾಗಿದೆ.
ಈ ನಡುವೆ ಈ ಉಗ್ರರ ಮಾಸ್ಟರ್ ಮೈಂಡ್ ಆಗಿರುವ ತಡಿಯಂಟವಿಡೆ ನಝೀರ್ ಪರಪ್ಪನ ಅಗ್ರಹಾರ ಕೇಂದ್ರ ಬಂದಿ ಖಾನೆಯಲ್ಲಿ ರಾಜಾತಿಥ್ಯ ಅನುಭವಿಸುತ್ತಿದ್ದ ಸಂಗತಿಯೂ ಬಯಲಾಗಿದೆ. ಉಗ್ರರನ್ನು ಜೈಲಿನ ಹೈ ಸೆಕ್ಯುರಿಟಿ ಸೆಲ್ನಲ್ಲಿ ಇಡಲಾಗುತ್ತದೆ. ಆದರೆ ನಝೀರ್ಗೆ ಜೈಲಿನಲ್ಲಿ ಬೇರೆ ಬ್ಯಾರಕ್ಗಳಿಗೆ ಓಡಾಡುವ ಸ್ವಾತಂತ್ರ್ಯ ಇತ್ತು ಎಂದು ಮೂಲಗಳು ತಿಳಿಸಿವೆ. ಈತ ಜೈಲು ಸಿಬ್ಬಂದಿಗಳಿಗೆ ಯಥೇಚ್ಚವಾಗಿ ಹಣ ನೀಡುತ್ತಿದ್ದುದೇ ಇದಕ್ಕೆ ಕಾರಣ. ಇದು ಜೈಲಿನಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ ಎನ್ನಲಾಗಿದೆ. ಅಲ್ಲದೆ ಜೈಲು ಸಿಬ್ಬಂದಿಗಳು ಪರಪ್ಪನ ಅಗ್ರಹಾರಕ್ಕೆ ವರ್ಗಾವಣೆ ಮಾಡಿಸಿಕೊಳ್ಳಲು ಲಕ್ಷಗಟ್ಟಲೆ ಹಣ ನೀಡಲೂ ಸಿದ್ಧರಿರುತ್ತಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇಲ್ಲಿ ಸಿಗುವ ಗಿಂಬಳ ಸಂಬಳಕ್ಕಿAತಲೂ ಅಧಿಕ ಎನ್ನಲಾಗಿದ್ದು, ಜೈಲಿನಲ್ಲಿ ಇದ್ದರೂ ನಝೀರ್ ಉಗ್ರ ಕೃತ್ಯ ಎಸಗಲು ನಿರ್ದೇಶನ ನೀಡುತ್ತಾನೆ ಎಂದರೆ ನಮ್ಮ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆಯೇ ಅನುಮಾನ ಹುಟ್ಟುತ್ತದೆ. ಹಣಕ್ಕಾಗಿ ದೇಶದ್ರೋಹಿಗಳನ್ನೇ ಬೆಂಬಲಿಸುವ ಸಿಬ್ಬಂದಿ, ಅಧಿಕಾರಿಗಳ ಬಗ್ಗೆ ಜಿಗುಪ್ಸೆ ಮೂಡುತ್ತದೆ.
ಜೈಲಿನಲ್ಲಿ ವ್ಯಾಪಾರ
ನಝೀರ್ ಜೈಲಲ್ಲಿದ್ದುಕೊಂಡೆ ಇತರ ಕೈದಿಗಳಿಗೆ ಡ್ರೆöÊ ಫ್ರೂಟ್ಸ್, ಬಟ್ಟೆ, ಸ್ವೀಟ್ಸ್ನ್ನು ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಇದನ್ನು ದುಪ್ಪಟ್ಟು ಬೆಲೆಗೆ ಮಾರುತ್ತಿದ್ದುದರಿಂದ ಇವನಿಗೆ ಸಾವಿರಾರು ರೂಪಾಯಿಗಳ ಆದಾಯವೂ ಇತ್ತು. ಅಲ್ಲದೆ ಈತ ಬಡ ಅಮಾಯಕ ಹಿಂದೂ ಹುಡುಗರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸುವುದರಲ್ಲೂ ತೊಡಗಿದ್ದ. ಕೇರಳದ ಯಾರೇ ಮುಸ್ಲಿಂ ಕೈದಿಗಳು ಬಂದರೆ ಜೈಲು ಸಿಬ್ಬಂದಿಗಳು ಇವನ ಗಮನಕ್ಕೆ ತರುತ್ತಿದ್ದರು. ಅವರನ್ನು ಈತ ಮಾತನಾಡಿಸಿ ತನ್ನ ನಿಕಟವರ್ತಿಗಳನ್ನಾಗಿ ಮಾಡಿಕೊಳ್ಳುತ್ತಿದ್ದ. ಅಲ್ಲದೆ ಅವರನ್ನೂ ತಾನಿರುವ ಹೈ ಸೆಕ್ಯುರಿಟಿ ಸೆಲ್ಗೆ ಹಾಕಿಸಿಕೊಳ್ಳುತ್ತಿದ್ದ. ಆದರೆ ಜೈಲು ಸಿಬ್ಬಂದಿ ಮಾತ್ರ ನಝೀರ್ನ ದುಷ್ಕೃತ್ಯವನ್ನು ಕಂಡೂ ಕಾಣದಂತ್ತಿದ್ದರು ಎಂಬ ಸಂಗತಿಯೊAದು ವಿಚಾರಣೆ ವೇಳೆ ಹೊರಬಿದ್ದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಆರೋಪಿಗಳ ಮನೆಯಿಂದ ಮಿಲಿಟರಿ ಪೊಲೀಸರು ಬಳಸುವ ೪೫ ಸಜೀವ ಗುಂಡುಗಳನ್ನು (೩೦೩ ಮತ್ತು ೯ ಎಂಎA) ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ಗುಂಡುಗಳು ಶಂಕಿತ ಉಗ್ರರ ಕೈಸೇರಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ೯ ಎಂಎAನ ಸಜೀವ ಗುಂಡುಗಳು ಪೊಲೀಸರಿಗೆ ಮಾತ್ರ ಸೀಮಿತವಾಗಿವೆ. ಇವುಗಳನ್ನು ಬಿಎಸ್ಎಫ್, ಐಟಿಬಿಪಿ ಅರೆಸೇನಾ ಪಡೆಗಳು ಮಾತ್ರ ಬಳಸುತ್ತವೆ. ಇದು ಇವರ ಕೈಗೆ ಸಿಕ್ಕಿರುವುದು ಮಾವೋವಾದಿಗಳು- ಪೊಲೀಸ್ ಸಂಘರ್ಷದಲ್ಲಿ ಕಳುವಾಗಿದ್ದಾ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಾರಾಗೃಹ ಎಡಿಜಿಪಿ ತನಿಖೆ
ಐವರು ಶಂಕಿತ ಉಗ್ರರಿಗೆ ೨೦೦೮ರ ಸರಣಿ ಸ್ಫೋಟದ ಪ್ರಮುಖ ಆರೋಪಿ ನಝೀರ್ ಕಾರಾಗೃಹದಲ್ಲೇ ಭಯೋತ್ಪಾದನೆ ತರಬೇತಿ ನೀಡಿದ್ದು ಹೇಗೆ? ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿತ ಉಗ್ರ ನಝೀರ್, ಪರಪ್ಪನ ಅಗ್ರಹಾರ ಜೈಲಿನಲ್ಲೇ ಭಯೋತ್ಪಾದನೆಗೆ ಸೆಳೆದದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸುವಂತೆ ಎಡಿಜಿಪಿ (ಕಾರಾಗೃಹ) ಮಾಲಿನಿ ಕೃಷ್ಣಮೂರ್ತಿ ಶುಕ್ರವಾರ ಆದೇಶಿಸಿದ್ದಾರೆ. ಬಂಧಿತ ವ್ಯಕ್ತಿಗಳು ಲಷ್ಕರ್-ಎ-ತೊಯ್ಬಾ (ಐಇಖಿ) ಉಗ್ರನ ಸಂಪರ್ಕಕ್ಕೆ ಬಂದಿದ್ದು ಹೇಗೆ? ಅವರಿಗೆ ಹೇಗೆ ಭಯೋತ್ಪಾದನೆ ತರಬೇತಿ ನೀಡಲಾಯಿತು ಎಂಬುದನ್ನು ಆಮೂಲಾಗ್ರ ತನಿಖೆ ನಡೆಸುವಂತೆ ಅವರು ಸೂಚಿಸಿದ್ದಾರೆ.
ನಝೀರ್ ದುಷ್ಕೃತ್ಯ ಬಯಲಾಗುತ್ತಿದ್ದಂತೆ ಶುಕ್ರವಾರ ಜೈಲಿನಲ್ಲಿ ಇತರ ಕೈದಿಗಳು ‘ನೀನು ನಮ್ಮ ದೇಶದ ಅನ್ನ ತಿಂದು ನಮ್ಮ ದೇಶಕ್ಕೇ ದ್ರೋಹ ಮಾಡುತ್ತೀಯ’ ಎಂದು ನಿಂದಿಸಿದ್ದಲ್ಲದೇ ಧರ್ಮದೇಟು ನೀಡಲು ಮುಂದಾದಾಗ ಜೈಲು ಸಿಬ್ಬಂದಿಗಳು ರಕ್ಷಿಸಿ ಕರೆದೊಯ್ದಿದ್ದಾರೆ.
ಸುಳಿವು ಸಿಕ್ಕಿದ್ದು ಹೇಗೆ ?
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾತ್ರಿ ಹನ್ನೆರಡು -ಒಂದು ಗಂಟೆ ಸಮಯದಲ್ಲಿ ಎರಡು ಮೊಬೈಲ್ಗಳು ಸಂಭಾಷಣೆಯಲ್ಲಿ ನಿರತವಾಗಿರುವ ಸಣ್ಣ ಸುಳಿವೊಂದು ಕೇಂದ್ರ ಗುಪ್ತಚರ ವಿಭಾಗಕ್ಕೆ ಸಿಕ್ಕಿತ್ತು. ನಂತರ ಯಾರು ಬಳಸುತ್ತಿದ್ದಾರೆ ಎಂದು ಇಲಾಖೆ ಕುತೂಹಲದಿಂದಲೇ ತನಿಖೆ ನಡೆಸಲು ಮುಂದಾಯಿತು.
ಅದರಲ್ಲಿ ಒಂದು ಮೊಬೈಲ್ಗೆ ಬರುತ್ತಿದ್ದ ಮತ್ತು ಹೋಗುತ್ತಿದ್ದ ಎಲ್ಲ ಫೋನ್ ಕರೆಗಳನ್ನು ಅಧಿಕಾರಿಯೊಬ್ಬರು ಮೂರು ತಿಂಗಳ ಕಾಲ ಕದ್ದಾಲಿಸಿದ್ದರು. ಕಳೆದ ಒಂದು ತಿಂಗಳ ಅವಧಿಯಲ್ಲಿ ಸಂಭಾಷಣೆಯಲ್ಲಿ ನಿಗೂಢವಾದ ಕೋಡ್ ವರ್ಡ್ಗಳ ಬಳಕೆ ಜಾಸ್ತಿಯಾಗಿತ್ತು. ಹಾಗಾಗಿ ಗುಪ್ತಚರ ಅಧಿಕಾರಿಗಳು ಅಲರ್ಟ್ ಆಗಿದ್ದರು. ಕರೆ ಮೂಲ ಪತ್ತೆ ಹಚ್ಚಿದಾಗ ಹೀಗೆ ಮಾತನಾಡುತ್ತಿದ್ದುದು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಮತ್ತು ನಝೀರ್ ಎಂದು ತಿಳಿದು ಬಂತು.
೨೦೧೭ರಲ್ಲಿ ನಡೆದ ನೂರ್ ಅಹ್ಮದ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾಗ ನಝೀರ್ ಸಂಪರ್ಕಕ್ಕೆ ಬಂದಿದ್ದ ಜುನೈದ್ನನ್ನು ನಝೀರ್ ಲಷ್ಕರ್ಗೆ ಪರಿಚಯಿಸಿದ್ದ, ಜೈಲಿನಿಂದ ಬಿಡುಗಡೆಯಾದ ಬಳಿಕ ಲಷ್ಕರ್ ಜತೆ ಸೇರಿಕೊಂಡು ಉಗ್ರನಾಗೇ ಬದಲಾದ. ಸಾಕಷ್ಟು ಸಮಯ ಕದ್ದಾಲಿಕೆಯ ನಂತರ ಉಗ್ರರು ಧಾಳಿ ನಡೆಸಲು ಸಜ್ಜಾದ ಬೆನ್ನಲ್ಲೇ ಅಲರ್ಟ್ ಆಗಿದ್ದ ಸಿಸಿಬಿ ಅಧಿಕಾರಿಗಳು ಎಲ್ಲರ ಹೆಡೆಮುರಿ ಕಟ್ಟಿದ್ದಾರೆ.
ಗ್ರೇನೇಡ್ ಸಿಕ್ಕಿದ ಬಗ್ಗೆ ತನಿಖೆ
ಉಗ್ರರಿಗೆ ಗ್ರೆನೇಡ್ ಸಿಕ್ಕಿರುವ ಬಗ್ಗೆ ನ್ಯಾಯಾಲಯದ ಅನುಮತಿ ಪಡೆದ ಬಳಿಕ ವಿಧಿ ವಿಜ್ಞಾನ ಪ್ರಯೋಗಾಲಯ (ಈSಐ) ಹಾಗೂ ರಾಷ್ಟಿçÃಯ ಬಾಂಬ್ ಡಾಟಾ ಸೆಂಟರ್ (ಓಃಆಅ)ಗಳು ಈ ಪರಿಶೀಲನೆ ಆರಂಭಿಸಲಿವೆ. ಮೊದಲಿಗೆ ಗ್ರೆನೇಡ್ಗಳನ್ನು ನಿಷ್ಕಿçಯಗೊಳಿಸಿ ಅವುಗಳ ತಯಾರಿಕೆಗೆ ಬಳಕೆಯಾಗಿರುವ ಪ್ರತಿಯೊಂದು ಕಚ್ಚಾ ವಸ್ತುಗಳನ್ನು ಇವರು ಹೇಗೆ ಸಂಗ್ರಹಿಸಿ ತಯಾರಿಸಿದ್ದಾರೆ ಎಂದು ಪರಿಶೀಲಿಸಲಾಗುತ್ತದೆ. ಗ್ರೆನೇಡ್ ಮಾದರಿಯನ್ನು ಬಳಿಕ ‘ಎನ್ಬಿಡಿಸಿ' ಡಾಟಾಗಳ ಜೊತೆಗೆ ವಿಶ್ಲೇಷಣೆ ಮಾಡಲಾಗುತ್ತದೆ. ದೇಶದಲ್ಲಿ ಎಲ್ಲಿಯೇ ಸ್ಫೋಟ ಸಂಭವಿಸಿದರೂ ಪ್ರತೀ ಸ್ಫೋಟದ ಅಂಕಿ ಅಂಶವು ‘ಎನ್ಬಿಡಿಸಿ' ಬಳಿ ಇದ್ದು, ಈ ಮಾದರಿಯ ಗ್ರೆನೇಡ್ ಎಲ್ಲಿಯಾದರೂ ಬಳಕೆಯಾಗಿದೆಯಾ ಎಂಬುದರ ಕುರಿತು ಕೂಲಂಕಷವಾಗಿ ಪರಿಶೀಲನೆ ನಡೆಸುತ್ತದೆ. ಈ ಪ್ರಕರಣದ ಪ್ರಾಥಮಿಕ ತನಿಖಾ ವರದಿಯನ್ನು ಸಿಸಿಬಿ ಪೊಲೀಸರು ಕೇಂದ್ರ ಗೃಹ ಇಲಾಖೆಗೆ ರವಾನೆ ಮಾಡಿದ್ದಾರೆ. ಬಂಧನವಾದ ಶಂಕಿತ ಉಗ್ರರ ಪೂರ್ಣ ಮಾಹಿತಿ ಹಾಗೂ ಸಂಚಿನ ಬಗ್ಗೆ ವರದಿಯಲ್ಲಿ ಉಲ್ಲೇಖವಾಗಿದೆ.
ಶಂಕಿತರು ಹೊಂದಿದ್ದ ಸಂಪರ್ಕಗಳ ಕುರಿತು ಯುಎಪಿಎ ಸೆಕ್ಷನ್ ಅಡಿಯಲ್ಲಿ ಎರಡು ವರ್ಷಗಳ ಸಿಡಿಆರ್ ಪಡೆದು ಪರಿಶೀಲನೆ ಮಾಡುತ್ತಿದ್ದು, ಈ ಹಿಂದೆ ಹೊಂದಿದ್ದ ಮೊಬೈಲ್ ನಂಬರ್ಗಳ ಸಂಪರ್ಕಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ಶಂಕಿತರು ವಾಟ್ಸಪ್ ಮೂಲಕ ಹಲವರಿಗೆ ಕರೆ ಮಾಡಿದ್ದು ಹಲವರ ಜೊತೆ ವಾಟ್ಸಪ್ ಚಾಟಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ. ಯಾವ ಲೋಕೇಷನ್ಗಳಿಗೆ ಕರೆಗಳು ಹೋಗಿವೆ ಎಂದು ತನಿಖೆ ನಡೆಸುತ್ತಿದ್ದು ಒಟ್ಟು ವಶಪಡಿಸಿಕೊಂಡಿರುವ ೧೨ ಮೊಬೈಲ್ ಫೋನ್ ರಿಟ್ರೀವ್ ಮಾಡಲಾಗುತ್ತಿದೆ.
ಐವರು ಶಂಕಿತರ ಬ್ಯಾಂಕ್ ಖಾತೆ ಪರಿಶೀಲನೆ ವೇಳೆ ತಲೆಮರೆಸಿಕೊಂಡಿರುವ ಉಗ್ರ ಮುಖಂಡ ಜುನೈದ್ ವಿದೇಶದಿಂದ ಹಣ ಕಳಿಸುತ್ತಿದ್ದುದು ಬೆಳಕಿಗೆ ಬಂದಿದೆ.
ವಾಕಿ ಟಾಕಿ ಅಲ್ಲ
ಶಂಕಿತ ಉಗ್ರರ ಬಳಿ ಸಿಕ್ಕಿದ್ದು ವಾಕಿ ಟಾಕಿ ಎಂದು ಮೊದಲು ಪೊಲೀಸರು ಭಾವಿಸಿದ್ದರು. ಆದರೆ ಇಂದಿನ ತಜ್ಞರ ಪರಿಶೀಲನೆಯಲ್ಲಿ ಅದು ವಾಕಿ ಟಾಕಿ ಅಲ್ಲ ಬಾಂಬ್ ಸ್ಫೋಟ ಮಾಡಲು ವೈರ್ ಲೆಸ್ ಆಗಿ ಬಳಸಲು ತಯಾರು ಮಾಡಿಕೊಂಡಿರುವ ಮಾಡಿಫೈಡ್ ಟ್ರಿಗರ್ಗಳು ಎಂದು ತಿಳಿದು ಬಂದಿದೆ. ಉಗ್ರರಿಗೆ ಬಾಂಬ್ ಸ್ಫೋಟಿಸಲು ಐಇಡಿ (Imಠಿಡಿoviseಜ exಠಿಟosive ಜeviಛಿe) ಸರಬರಾಜು ಮಾಡಲು ನಝೀರ್ ಯೋಜನೆ ಹಾಕಿಕೊಂಡಿದ್ದ ಎನ್ನಲಾಗಿದೆ. ಅಷ್ಟರಲ್ಲಿ ಪೊಲೀಸರು ಬಂಧಿಸಿ ಭಾರೀ ಸಾವು ನೋವು ತಪ್ಪಿಸಿದ್ದಾರೆ. ದುಷ್ಟರ ಮೇಲೆ ಹದ್ದಿನ ಕಣ್ಣಿಟ್ಟು ನಮ್ಮನ್ನು ರಕ್ಷಿಸುತ್ತಿರುವ ನಮ್ಮ ಪೊಲೀಸರು ನಿಜಕ್ಕೂ ಅಭಿನಂದನಾರ್ಹರು.