ಮಡಿಕೇರಿ, ಜು. ೨೨: ಇಲ್ಲಿಗೆ ಸಮೀ ಪದ ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ, ಗಾಳಿಯ ರಭಸ ಹೆಚ್ಚಾಗಿದೆ. ಅವಂದೂರು ಗ್ರಾಮದಲ್ಲಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ಉರುಳಿ ಬಿದ್ದು ಮನೆಗೆ ಹಾನಿಯಾ ಗಿದೆ. ಅವಂದೂರು ಬೆಟ್ಟತ್ತೂರು ರಸ್ತೆಗಡ್ಡಲಾಗಿ ಉರುಳಿರುವ ಮರ ರಸ್ತೆ ಬದಿಯಿರುವ ಯೋಗೇಶ್ ಎಂಬವರ ಮನೆ ಮೇಲೆ ಬಿದ್ದಿದೆ. ಆಚಾರಿ ಕೆಲಸ ಮಾಡಿಕೊಂಡಿರುವ ಯೋಗೇಶ್ ಅವರ ಮನೆಗೆ ಭಾಗಶಃ ಹಾನಿಯಾ ಗಿದ್ದು, ಕೆಲಸ ಮಾಡುವ ಕೊಟ್ಟಿಗೆ ಸಂಪೂರ್ಣ ಹಾನಿಯಾಗಿದೆ. ಮನೆಯ ಸನಿಹದಲ್ಲಿದ್ದ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಮರಗಳು ಉರುಳಿ ವಿದ್ಯುತ್ ಕಂಬಗಳು ನೆಲಕಚ್ಚಿದ್ದು, ಗ್ರಾಮದಲ್ಲಿ ಕತ್ತಲಾವರಿ ಸಿದೆ. ಮೊಬೈಲ್ ಬ್ಯಾಟರಿ ಚಾರ್ಜ್ ಕೂಡ ಇಲ್ಲದೆ ಜನರು ಸಂಪರ್ಕ ಸಾಧಿಸಲೂ ಕೂಡ ಕಷ್ಟ ಪಡುವಂತಾಗಿದೆ.