ಮಡಿಕೇರಿ, ಜು. ೨೧: ಜಿಲ್ಲೆಯಲ್ಲಿ ಇದೀಗ ಪುಷ್ಯ ಮಳೆ ತುಸು ಬಿರುಸು ತೋರುವ ಲಕ್ಷಣಗಳು ಗೋಚರಿಸುತ್ತಿದ್ದರೂ, ಶುಕ್ರವಾರದಂದು ಮಳೆ ಬಹುತೇಕ ಮತ್ತೆ ಕ್ಷೀಣಗೊಂಡAತಿತ್ತು. ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ೧.೭೭ ಇಂಚಿನಷ್ಟು ಮಳೆಯಾಗಿದೆ. ಮಳೆಯೊಂದಿಗೆ ಗಾಳಿಯೂ ಹೆಚ್ಚಾಗಿದ್ದು, ಹಲವೆಡೆಗಳಲ್ಲಿ ಮರ - ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ವ್ಯತ್ಯಯವೂ ಉಂಟಾಗಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಮಡಿಕೇರಿ ತಾಲೂಕಿನಲ್ಲಿ ಮಳೆ ಒಂದಷ್ಟು ಕಡಿಮೆ ಎಂಬAತಿದ್ದರೆ, ವೀರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಹೆಚ್ಚಾಗಿದೆ. ವೀರಾಜಪೇಟೆಯಲ್ಲಿ ಸರಾಸರಿ ೨.೮೪ ಇಂಚು ಮಳೆಯಾಗಿದ್ದರೆ, ಸೋಮವಾರಪೇಟೆ ತಾಲೂಕಿನಲ್ಲಿ ೧.೫೭ ಇಂಚು ಮಳೆ ದಾಖಲಾಗಿದೆ. ಮಡಿಕೇರಿ ತಾಲೂಕಿನಲ್ಲಿ ಈ ಪ್ರಮಾಣ ೦.೯೦ ಇಂಚಿನಷ್ಟಿತ್ತು.
ಅಮ್ಮತ್ತಿ - ಬಾಳೆಲೆಯಲ್ಲಿ ಅಧಿಕ
ಸಾಮಾನ್ಯವಾಗಿ ಅಮ್ಮತ್ತಿ ಹೋಬಳಿ ಹಾಗೂ ಬಾಳೆಲೆ ಹೋಬಳಿಯಲ್ಲಿ ಕಡಿಮೆಯಿರುತ್ತಿದ್ದ ಮಳೆ ಕಳೆದ ೨೪ ಗಂಟೆಗಳಲ್ಲಿ ಈ ಭಾಗದಲ್ಲಿ ಹೆಚ್ಚಾಗಿದೆ. ಅಮ್ಮತ್ತಿ ಹೋಬಳಿಯಲ್ಲಿ ೪.೨೮ ಇಂಚು, ಬಾಳೆಲೆ ಹೋಬಳಿಯಲ್ಲಿ ೩.೬೮ ಇಂಚು ಮಳೆ ದಾಖಲಾಗಿದೆ. ಉಳಿದಂತೆ ವೀರಾಜಪೇಟೆ ತಾಲೂಕಿನ ಹೋಬಳಿಗಳಾದ ಶ್ರೀಮಂಗಲ ೩.೧೨, ಪೊನ್ನಂಪೇಟೆ ೩, ಹುದಿಕೇರಿಗೆ ೨.೬೯ ಇಂಚುಗಳಷ್ಟು ಮಳೆಯಾಗಿದೆ.
ಸೋಮವಾರಪೇಟೆ ತಾಲೂಕಿನಲ್ಲಿ ಸೋಮವಾರಪೇಟೆ ಕಸಬಾ ೨.೬೦, ಶನಿವಾರಸಂತೆ ೨.೦೮, ಶಾಂತಳ್ಳಿ ೩.೧೬, ಕೊಡ್ಲಿಪೇಟೆಯಲ್ಲಿ ೧.೨೮ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೦.೯೦ ಇಂಚು ಮಳೆಯಾಗಿದ್ದು, ತಾಲೂಕಿನ ನಾಪೋಕ್ಲು ಹೋಬಳಿಯಲ್ಲಿ ೧.೦೯ ಇಂಚು, ಸಂಜಾಜೆ ೦.೮೪, ಭಾಗಮಂಡಲ ೧.೨೯ ಇಂಚು ಮಳೆಯಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕಳೆದ ರಾತ್ರಿ ಗಾಳಿಯ ರಭಸ ಹೆಚ್ಚಾಗಿದ್ದು, ಒಂದೇ ದಿನದಲ್ಲಿ ೫೪ ವಿದ್ಯುತ್ ಕಂಬ ಹಾನಿ
ಗುರುವಾರದಂದು ಜಿಲ್ಲೆಯ ಹಲವೆಡೆ ಸುರಿದ ಭಾರೀ ಮಳೆ ಹಾಗೂ ಗಾಳಿಯಿಂದಾಗಿ ಒಂದೇ ದಿನದಲ್ಲಿ ೫೪ ವಿದ್ಯುತ್ ಕಂಬಗಳು ಹಾನಿಗೀಡಾಗಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಮಡಿಕೇರಿ ನಗರವೂ ಸೇರಿದಂತೆ ವಿವಿಧೆಡೆ ಹಾನಿಯಾಗಿವೆ.
ನಗರದಲ್ಲಿ ನಿನ್ನೆ ಹಗಲು ಮಳೆ ಕಡಿಮೆಯಿತ್ತಾದರೂ ರಾತ್ರಿ ಗಾಳಿಯ ರಭಸ ಹೆಚ್ಚಾಗಿತ್ತು. ಜಿಲ್ಲಾಧಿಕಾರಿ ನಿವಾಸದ ಬಳಿ ಮರಬಿದ್ದು, ಸಮಸ್ಯೆಯಾಗಿತ್ತು. ಇದನ್ನು ರಾತ್ರಿಯಿಂದಲೇ ಕಾರ್ಯಾಚರಣೆ ನಡೆಸಿ ಸರಿಪಡಿಸಲಾಗಿದೆ. ಇದೂ ಸೇರಿದಂತೆ ಜಿಲ್ಲೆಯ ಇನ್ನಿತರ ಭಾಗಗಳಲ್ಲಿ ವಿಶೇಷವಾಗಿ ವೀರಾಜಪೇಟೆ ತಾಲೂಕಿನಲ್ಲಿ ಅಧಿಕ ಸಮಸ್ಯೆಯಾಗಿದ್ದು, ಒಟ್ಟು ೫೪ ಕಂಬಗಳು ಜಖಂಗೊAಡಿವೆ. ಇದನ್ನು ಆದ್ಯತೆ ಮೇರೆ ಸರಿಪಡಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಕೆಲಸ ಬಾಕಿಯಿದ್ದು, ಮುಂದುವರಿಯುತ್ತಿರುವುದಾಗಿ ಸೆಸ್ಕ್ ಇ.ಇ. ಅನಿತಾಬಾಯಿ ಅವರು ಮಾಹಿತಿ ನೀಡಿದ್ದಾರೆ.ಮರಬಿದ್ದು, ವಿದ್ಯುತ್ ವ್ಯತ್ಯಯವುಂಟಾಗಿತ್ತು. ಇದನ್ನು ಸರಿಪಡಿಸುವ ಕೆಲಸ ನಡೆದಿದೆ ಎಂದು ಇಲಾಖಾ ಮೂಲಗಳು ತಿಳಿಸಿವೆ.