*ಗೋಣಿಕೊಪ್ಪ, ಜು. ೨೧: ಎಲ್ಲರಿಗೂ ಸೇರಬೇಕಾದ ಭೂಮಿ, ನೀರು, ವಿದ್ಯುತ್ ಸೌಲಭ್ಯಗಳಲ್ಲಿ ರಿಯಾಯಿತಿ ಪಡೆದುಕೊಂಡು ಲಾಭ ಮಾಡಿಕೊಳ್ಳುತ್ತಿರುವ ಖಾಸಗಿ ಕಂಪೆನಿಗಳು ಸರ್ಕಾರದಿಂದ ಶೇ. ೧೦೦ ರಷ್ಟು ಮೀಸಲಾತಿ ಅನುಭವಿಸುತ್ತಿವೆ. ಇದರ ಲಾಭವನ್ನು ಕೆಲವೇ ಜನರು ಅನುಭವಿಸುತ್ತಿದ್ದು, ಖಾಸಗಿ ಕಂಪೆನಿಗಳಲ್ಲಿ ಮೀಸಲಾತಿ ಮೂಲಕ ಎಸ್ಸಿ-ಎಸ್ಟಿ ಅವರಿಗೂ ಅವರಿಗೂ ನೀಡಬೇಕೆಂದು ಆಂದೋಲನ ರಾಷ್ಟಿçÃಯ ಮಂಡಳಿ ಸದಸ್ಯ ಡಾ. ಮಹೇಶ ಕುಮಾರ ರಾಠೋಡ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಗೋಣಿಕೊಪ್ಪದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು, ಐ.ಟಿ.ಐ. ಕಾಲೇಜು ಮತ್ತು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಅವಶ್ಯಕತೆ ಇದೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಬೆಲೆ ಏರಿಕೆಯಿಂದ ಜನಸಾಮಾನ್ಯರ ಕೃಷಿ ಕೂಲಿಕಾರರ ಜೀವನ ನಿರ್ವಹಣೆ ದುಸ್ತರವಾಗಿದೆ. ಎಲ್ಲಾ ಕಾರ್ಮಿಕರ ವೇತನವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ನಾಡಿದ ಅವರು, ಗೋಣಿಕೊಪ್ಪದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು, ಐ.ಟಿ.ಐ. ಕಾಲೇಜು ಮತ್ತು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಅವಶ್ಯಕತೆ ಇದೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಬೆಲೆ ಏರಿಕೆಯಿಂದ ಜನಸಾಮಾನ್ಯರ ಕೃಷಿ ಕೂಲಿಕಾರರ ಜೀವನ ನಿರ್ವಹಣೆ ದುಸ್ತರವಾಗಿದೆ. ಎಲ್ಲಾ ಕಾರ್ಮಿಕರ ವೇತನವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಯಾರು ಉಳುಮೆ ಮಾಡ ಬಯಸು ತ್ತಾರೋ ಅವರಿಗೆ ಸರ್ಕಾರವೇ ಭೂಮಿ ಒದಗಿಸುವಂತಹ ಸಮಗ್ರ ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸಬೇಕು ಎಂದರು. ರಾಜ್ಯದಲ್ಲಿ ಅಂದಾಜು ೫೦ ಲಕ್ಷ ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು ನಿವೇಶನಗಳಿಲ್ಲ. ೫ ಲಕ್ಷ ಎಕರೆ ಜಮೀನನ್ನು ಬಡವರ ನಿವೇಶನಕ್ಕಾಗಿಯೇ ಮೀಸಲಿಡಬೇಕು, ಮನೆ ಕಟ್ಟಿಕೊಳ್ಳಲು ೫ ಲಕ್ಷ ರೂಪಾಯಿ ಅನುದಾನ ಒದಗಿಸಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಧರ್ಮರಾಜ, ಜಿಲ್ಲಾ ಸಂಚಾಲಕ ರಮೇಶ ಮಾಯಮುಡಿ, ಸದಸ್ಯರಾದ ಬಿ.ಕೆ. ಶಾಂತಿ, ಗಣೇಶ್ ಇದ್ದರು.