ಮಡಿಕೇರಿ, ಜು. ೨೧: ತಾ.೧೭ರಂದು ಬೆಂಗಳೂರಿನ ವಿಧಾನಸೌಧ ಬ್ಯಾಂಕ್ವೆಟ್ ಹಾಲ್ನಲ್ಲಿ ದಕ್ಷಿಣ ಭಾರತ ಉತ್ಸವದ ಲಾಂಛನವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಬಿಡುಗಡೆ ಮಾಡಿದರು.
ಪ್ರವಾಸೋದ್ಯಮ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ. ವಿ. ರಾಮಪ್ರಶಾಂತ್ ಮನೋಹರ್, ಎಫ್ಕೆಸಿಸಿಐ ಅಧ್ಯಕ್ಷ ಬಿ.ವಿ. ಗೋಪಾಲ್ ರೆಡ್ಡಿ ಹಾಗೂ ಟೂರಿಸಂ ಕಮಿಟಿ ಚೇರ್ಮನ್ ರಾಧಾ ಜಿ.ಕೆ. ಶೆಟ್ಟಿ ಮತ್ತು ಟೂರಿಸಂ ಕಮಿಟಿಯ ಸಲಹೆಗಾರ ಕೆ.ಕೆ. ಶಿವ ಷಣ್ಮುಗಂ ಉಪಸ್ಥಿತರಿದ್ದರು.
ಹಲವು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಗೆ ಉಪ ನಿರ್ದೇಶಕರು ಇಲ್ಲದ ಕಾರಣ ಕೊಡಗಿನ ನಿಯೋಗ ಇವರುಗಳನ್ನು ಭೇಟಿ ಮಾಡಿ ಖಾಯಂ ಹುದ್ದೆ ಭರ್ತಿ ಮಾಡಲು ಕೋರಿತು. ಇದಕ್ಕೆ ಸ್ಪಂದನ ನೀಡಿದ ಉನ್ನತ ಅಧಿಕಾರಿಗಳು ಅತೀ ಶೀಘ್ರದಲ್ಲಿ ಕೊಡಗು ಜಿಲ್ಲೆಗೆ ಉಪ ನಿರ್ದೇಶಕರನ್ನು ನೇಮಕ ಮಾಡುವುದಾಗಿ ಭರವಸೆ ನೀಡಿದರು.
ಕೊಡಗು ಜಿಲ್ಲಾ ಹೊಟೇಲ್ ರೆಸಾರ್ಟ್ ಮತ್ತು ಉಪಹಾರ ಗೃಹಗಳ ಸಂಘದ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಕಾರ್ಯದರ್ಶಿ ಎಂ.ಎ. ನಾಸಿರ್ ಅಹಮದ್, ಪ್ರಮುಖರಾದ ಆಸಿಫ್, ಚೆಯ್ಯಂಡ ಸತ್ಯ, ವಸಂತ್ ಪಾಲ್ಗೊಂಡಿದ್ದರು.