ವೀರಾಜಪೇಟೆ, ಜು. ೨೧: ವೀರಾಜಪೇಟೆ ಸಮೀಪದ ಬೇಟೋಳಿ ಗ್ರಾಮದ ವಿಲೀನ ಗೋನ್ಸಾಲ್ವೇಸ್ ಅವರು ಪೋರ್ಚುಗಲ್ ದೇಶದ ಲಿಸ್ ಬರ್ನ್ನಲ್ಲಿ ರೋಮನ್ ಕ್ಯಾಥೋಲಿಕ್ ಚರ್ಚ್ಗಳ ಒಕ್ಕೂಟದಲ್ಲಿ ನಡೆಯುವ ವಿಶ್ವ ಯುವಜನರ ದಿನ ಕಾರ್ಯಕ್ರಮದಲ್ಲಿ ಭಾರತೀಯ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
ಕ್ರೆöÊಸ್ತರ ಪರಮೋಚ್ಚ ಜಗದ್ಗುರುಗಳಾದ ಪೋಪ್ ಫ್ರಾನ್ಸಿಸ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದ್ದು, ಈ ಕಾರ್ಯಕ್ರಮದಲ್ಲಿ ವಿಶ್ವದ ಎಲ್ಲಾ ದೇಶಗಳಿಂದಲೂ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
ವಿಲೀನ ಗೋನ್ಸಾಲ್ವೇಸ್, ಭಾರತದ ಕ್ಯಾಥೋಲಿಕ ಯುವ ಸಂಚಲನದ ಮೈಸೂರು ಧರ್ಮಕ್ಷೇತ್ರದ ಪ್ರತಿನಿಧಿಯಾಗಿ ಭಾಗವಹಿಸುತ್ತಿದ್ದಾರೆ. ಕೊಡಗು ವಲಯದ ವೀರಾಜಪೇಟೆ ಡೀನರಿಯಿಂದ ಆಯ್ಕೆಯಾಗಿ ಭಾಗವಹಿಸುತ್ತಿರುವ ಏಕೈಕ ಪ್ರತಿನಿಧಿಯಾಗಿದ್ದಾರೆ.
ಇವರು ಮೈಸೂರು ಧರ್ಮಕ್ಷೇತ್ರದ ಭಾರತೀಯ ಕ್ಯಾಥೋಲಿಕ್ ಯುವ ಸಂಚಲನದ ಮಹಿಳಾ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೇಟೋಳಿ ಗ್ರಾಮದಲ್ಲಿ ವಾಸವಾಗಿರುವ ಇವರು ವೀರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತç ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ವಿಲ್ಫೆçಡ್ ಗೋನ್ಸಾಲ್ವೇಸ್ ಹಾಗೂ ಸ್ಟಲ್ಲಾ ಮೇರಿ ಡಿಸೋಜ ದಂಪತಿ ಪುತ್ರಿ.