ಶನಿವಾರಸAತೆ, ಜು. ೨೧: ಪಟ್ಟಣದ ಭಾರತಿ ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ವಾರದವರೆಗೆ “ಭಾರತೀಯ ಸಾಂಪ್ರದಾಯಿಕ ದಿನ’’ವನ್ನು ಆಚರಿಸಲಾಯಿತು.

ಕಾಲೇಜಿನ ವಿದ್ಯಾರ್ಥಿಗಳು ದೇಶಿ ಸಂಸ್ಕೃತಿ, ಸಂಪ್ರದಾಯವನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಉಡುಗೆ-ತೊಡುಗೆ ಧರಿಸಿ ಟ್ರೆಡಿಷನಲ್ ಡೇ ಆಚರಿಸಿ ಸಂಭ್ರಮಿಸಿದರು. ಗಂಡು ಮಕ್ಕಳು ಪಂಚೆ-ಅAಗಿ, ಶರ್ಟ್ ಹಾಗೂ ಕಾಲಿಗೆ ಚಪ್ಪಲಿ ಧರಿಸಿ ಬಂದರೆ ಹೆಣ್ಣುಮಕ್ಕಳು ಚಂದದ ಸೀರೆಯುಟ್ಟು, ಆಭರಣ ಧರಿಸಿ, ಕೈತುಂಬ ಗಾಜಿನ ಬಳೆ ತೊಟ್ಟು, ಹಣೆಯಲ್ಲಿ ಕುಂಕುಮವಿಟ್ಟು, ಮುಡಿಯಲ್ಲಿ ಹೂವು ಮುಡಿದು ಕಾಲೇಜಿಗೆ ಆಗಮಿಸಿದರು.

ಕಾಲೇಜಿನ ಆವರಣದ ತುಂಬ ಬಣ್ಣಬಣ್ಣದ ಸಾಂಪ್ರದಾಯಿಕ ಉಡುಗೆ-ತೊಡುಗೆ ಧರಿಸಿದ ವಿದ್ಯಾರ್ಥಿಗಳ ಸಂಭ್ರಮ-ಸಡಗರದ ಕಲರವ. ವಿವಿಧ ಭಂಗಿಯಲ್ಲಿ ಸಹಪಾಠಿಗಳ ಜತೆ ಫೋಟೋಗೆ ಫೋಸು ನೀಡುತ್ತಾ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರ ಜತೆಯಲ್ಲೂ ಫೋಟೋ ತೆಗೆಸಿಕೊಂಡು ಟ್ರೆಡಿಷನಲ್ ದಿನವನ್ನು ಆಚರಿಸಿ ಖುಷಿ ಹಂಚಿಕೊAಡರು.