ಮಡಿಕೇರಿ, ಜು. ೨೧: ಕೊಡಗು ಜಿಲ್ಲೆ ಕ್ರೀಡೆಯ ತವರೂರು. ಸದಾ ಒಂದಲ್ಲಾ ಒಂದು ಕ್ರೀಡಾ ಚಟುವಟಿಕೆ ಜಿಲ್ಲೆಯಲ್ಲಿ ನಡೆಯುತ್ತಿರುತ್ತವೆ. ಜನಾಂಗಗಳ, ಸಮುದಾಯಗಳ ಕ್ರೀಡಾಕೂಟಗಳು ಜಿಲ್ಲೆಯಲ್ಲಿ ನಡೆಯುತ್ತದೆ. ಮಳೆಗಾಲದಲ್ಲಿ ಕೆಸರುಗದ್ದೆ ಕ್ರೀಡಾಕೂಟ ಅದೇ ರೀತಿ ವಿಶೇಷತೆಗೆ ಕಾರಣವಾಗಿದೆ.

ಜನವರಿ ತಿಂಗಳಿನಿAದ ನಿರಂತರವಾಗಿ ಮೇ ತಿಂಗಳವರೆಗೆ ಯಾವುದೇ ಬಿಡುವಿಲ್ಲದೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕ್ರೀಡಾಕೂಟಗಳು ನಡೆಯುತ್ತವೆ. ಕೊಡಗು ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಕ್ರೀಡಾಕೂಟಗಳು ಯಾವುದೇ ಬಿಡುವಿಲ್ಲದೆ ನಡೆಯುತ್ತದೆ. ಮಳೆಗಾಲ ಬಂತೆAದರೆ ಸಾಕು, ಕೊಡಗು ಕೆಸರು ಗದ್ದೆ ಕ್ರೀಡಾಕೂಟಗಳಿಗೆ ಸಾಕ್ಷಿಯಾಗುತ್ತವೆ.

ವಿವಿಧ ಸಂಘ-ಸAಸ್ಥೆಗಳು ಮಳೆಗಾಲದಲ್ಲಿ ಕೆಸರುಗದ್ದೆ ಕ್ರೀಡಾಕೂಟಗಳನ್ನು ಆಯೋಜಿಸಿ ಮಳೆಗಾಲದಲ್ಲಿ ಕೂಡ ಕ್ರೀಡಾಪಟುಗಳಿಗೆ ಕ್ರೀಡಾ ಚುಟುವಟಿಕೆಯಲ್ಲಿ ಭಾಗವಹಿಸಲು ಅನುವುಮಾಡಿಕೊಡುತ್ತಿವೆ.

ಕೊಡಗು ಜಿಲ್ಲೆಯಲ್ಲಿ ನಡೆಯುವ ಕೆಸರುಗದ್ದೆ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ರಾಜ್ಯಮಟ್ಟದ ಕ್ರೀಡಾಪಟುಗಳು ಕೂಡ ಜಿಲ್ಲೆಗೆ ಆಗಮಿಸುತ್ತಾರೆ. ಕೊಡಗಿನಲ್ಲಿ ನಡೆಯುವ ಕೆಸರುಗದ್ದೆ ಕ್ರೀಡಾಕೂಟಗಳು ತನ್ನದೇ ಆದ ಸ್ಥಾನವನ್ನು ಪಡೆದಿದೆ.

ಕ್ರೀಡಾಪಟುಗಳು ಚಳಿ, ಮಳೆ, ಕೆಸರನ್ನು ಲೆಕ್ಕಿಸದೆ ಕೆಸರಿನೋಕುಳಿಯಲ್ಲಿ ಮಿಂದೆದ್ದು ಸಂಭ್ರಮಿಸುವ ದೃಶ್ಯ ಕೊಡಗು ಜಿಲ್ಲೆಯಲ್ಲಿ ಜುಲೈ ತಿಂಗಳಿನಿAದ ಸೆಪ್ಟೆಂಬರ್ ತಿಂಗಳವರೆಗೆ ಕಾಣಸಿಗುತ್ತದೆ.

ಬಹುಮಾನಕ್ಕಿಂತ ಕೆಸರಿನಲ್ಲಿ ಆಟ ಆಡುವುದೇ ದೊಡ್ಡ ಬಹುಮಾನ ಎಂದು ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಎಲ್ಲರೂ ಜೋಶ್ ತೋರಿಸುತ್ತಾರೆ. ಹಿಂದಿನ ಕಾಲದಲ್ಲಿ ನಾಟಿ ಆದ ನಂತರ ಪ್ರತಿ ಗ್ರಾಮದಲ್ಲಿ ನಾಟಿ ಓಟ ನಡೆಯುತಿತ್ತು. ನಾಟಿ ಓಟದಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನವಾಗಿ ಬಾಳೆಗೊನೆ, ಎರಡನೇ ಬಹುಮಾನವಾಗಿ ತೆಂಗಿನಕಾಯಿ ಹಾಗೂ ಮೂರನೇ ಬಹುಮಾನವಾಗಿ ವೀಳ್ಯೆದೆಲೆ ನೀಡಲಾಗುತ್ತಿತ್ತು. ಕಾಲಾನುಕ್ರಮದಲ್ಲಿ ಇದೇ ಮುಂದುವರಿದು ಕೆಸರುಗದ್ದೆ ಕ್ರೀಡಾಕೂಟ ಎಂದಾಯಿತು. ಮೊದಲು ನಾಟಿ ಓಟ ಮಾತ್ರ ನಡೆಯುತ್ತಿತ್ತು. ಆದರೆ ಇದೀಗ ನಾಟಿ ಓಟದೊಂದಿಗೆ ನಾನಾ ಕ್ರೀಡಾಕೂಟಗಳು ನಡೆಯುವದರೊಂದಿಗೆ ಕ್ರೀಡಾ ಪ್ರತಿಭೆಗಳಿಗೆ ಮಳೆಗಾಲದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಕೆಸರುಗದ್ದೆ ವೇದಿಕೆಯಾಗುತ್ತಿದೆ.

ಮನರಂಜನೆಯೊAದಿಗೆ ಆಟೋಟ

ಕೆಸರುಗದ್ದೆ ಕ್ರೀಡಾಕೂಟ ಈ ಹಿಂದೆ ನಾಟಿ ಓಟಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಕಾಲ ಕ್ರಮೇಣವಾಗಿ ಕೊಡಗು ಜಿಲ್ಲೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟಗಳು ಜನಪ್ರಿಯವಾಗತೊಡಗಿತು. ಇದೀಗ ಜಿಲ್ಲೆಯಲ್ಲಿ ನಡೆಯುವ ಕೆಸರುಗದ್ದೆ ಕ್ರೀಡಾಕೂಟಗಳಲ್ಲಿ ಬಹುತೇಕ ಎಲ್ಲಾ ಆಟಗಳು ಆಯೋಜಿಸಲಾಗುತ್ತಿದೆ.

ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಪುರುಷರಿಗೆ ಪ್ರತ್ಯೇಕ ವಿಭಾಗದಲ್ಲಿ ಪಂದ್ಯಾವಳಿ ನಡೆಯುತ್ತಿದೆ. ವಾಲಿಬಾಲ್, ಹ್ಯಾಂಡ್‌ಬಾಲ್, ನಾಟಿ ಓಟ, ಕಾಲಿಗೆ ಹಗ್ಗ ಕಟ್ಟಿ ಓಟ, ಫುಟ್ಬಾಲ್, ಕ್ರಿಕೆಟ್, ಹಗ್ಗಜಗ್ಗಾಟ, ಥ್ರೋಬಾಲ್, ಹೀಗೆ ಹಲವು ಕ್ರೀಡೆಗಳು ಕೂಡ ಕೆಸರಿನಲ್ಲಿ ನಡೆಯಲಿವೆ. ಬರಿಗಾಲಿನಲ್ಲಿ ಆಡಬೇಕಾಗಿರುವುದರಿಂದ ಕೆಸರುಗದ್ದೆ ಕ್ರೀಡಾಕೂಟಗಳಲ್ಲಿ ಆಟಗಾರರಿಗೆ ಗಾಯವಾಗುವ ಸಾಧ್ಯತೆ ಇದೆ. ಆದರೆ ಯಾವುದನ್ನು ಲೆಕ್ಕಿಸದೆ ಮಳೆಯ ನಡುವೆ ಕೆಸರಿನಲ್ಲಿ ಎದ್ದು, ಬಿದ್ದು, ನಾ ಮುಂದು, ತಾ ಮುಂದು ಎಂದು ಕೆಸರಿನಲ್ಲಿ ಆಡುವ ಆಟಗಾರರ ಝಲಕ್ ಸಾವಿರಾರು ಪ್ರೇಕ್ಷಕರನ್ನು ರೋಮಾಂಚನ ಗೊಳಿಸುತ್ತದೆ. ಹಚ್ಚ ಹಸಿರಿನ ಸುಂದರವಾದ ಪರಿಸರದ ಮಧ್ಯದಲ್ಲಿ ಕೆಸರು ಗದ್ದೆಯಲ್ಲಿ ಕ್ರೀಡಾಪಟುಗಳು ಆಟ ಆಡುತ್ತಿರುವ ದೃಶ್ಯಗಳನ್ನು ನೋಡುವುದೇ ರಮಣೀಯವಾಗಿರುತ್ತದೆ.

ಜಿಲ್ಲಾ ಯುವ ಒಕ್ಕೂಟದಿಂದ ಕಳೆದ ಹಲವು ವರ್ಷಗಳಿಂದ ಕಗ್ಗೋಡ್ಲುವಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಅತ್ಯಂತ ಜನಪ್ರಿಯತೆ ಪಡೆದುಕೊಂಡಿದೆ. ಆಗಸ್ಟ್ ೧೨ ರಂದು ಈ ಬಾರಿ ಪಂದ್ಯಾವಳಿ ಆಯೋಜನೆಗೊಂಡಿದ್ದು, ಸಹಸ್ರ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಕೆಸರು ಗದ್ದೆಯಲ್ಲಿ ಕ್ರಿಕೆಟ್!

ಕೊಡಗು ಜಿಲ್ಲೆಯಲ್ಲಿ ನಡೆಯುವ ಕೆಸರು ಗದ್ದೆ ಕ್ರೀಡಾಕೂಟಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್ ಪಂದ್ಯಾವಳಿ ಸೇರ್ಪಡೆಗೊಂಡು ಮತ್ತಷ್ಟು ಮೆರುಗು ನೀಡಿದೆ. ಕೆಸರು ಗದ್ದೆಯಲ್ಲಿ ಬ್ಯಾಟ್ ಬೀಸಿ ಸಿಕ್ಸ್ ಬಾರಿಸುತ್ತಾ, ಕೆಸರಿನಲ್ಲಿ ಟೆನ್ನಿಸ್ ಬಾಲ್ ಹುಡುಕುತ್ತಿರುವ ದೃಶ್ಯಗಳು ಮನರಂಜಿಸುತ್ತದೆ. ಕೆಸರುಗದ್ದೆ ಕ್ರಿಕೆಟ್‌ನಲ್ಲಿ ಆಟಗಾರರು ಬಾಲ್ ಮಾಡುವಾಗ ‘ಪುಲ್ಟಾಸ್’ ಬಾಲ್ ಹಾಕಬೇಕು.

ಉಳಿದಂತೆ ಕ್ರಿಕೆಟ್ ನಿಯಮಗಳಿಗೆ ಅನುಗುಣವಾಗಿ ಕೆಸರು ಗದ್ದೆ ಕ್ರೀಡಾಕೂಟಗಳಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತದೆ. ಕೊಡಗು ಜಿಲ್ಲೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟಗಳಲ್ಲಿ ಕ್ರಿಕೆಟ್ ಪಂದ್ಯ ಪರಿಚಯಿಸಿದ್ದು, ಕೊಡಗು ಗೌಡ ಯುವ ವೇದಿಕೆಯಾಗಿದೆ. ನಂತರ ಕೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ಮತ್ತಷ್ಟು ರಂಗು ಪಡೆದಿದೆ.

ಕೆಸರುಗದ್ದೆ ಕ್ರೀಡಾಕೂಟಗಳಲ್ಲಿ ಫುಟ್ಬಾಲ್ !

ಕೊಡಗು ಜಿಲ್ಲೆಯಲ್ಲಿ ಕೆಸರುಗದ್ದೆ ಫುಟ್ಬಾಲ್ ಪಂದ್ಯಾವಳಿಯಲ್ಲಿ ಹೆಸರು ವಾಸಿಯಾದ ಕೊಡಗಿನ ಕೊಂಡAಗೇರಿ, ಕುಂಜಿಲ, ಎಮ್ಮೆಮಾಡು, ಎಡಪಾಲ, ಬೇತ್ರಿ, ಕಂಡAಗಾಲ, ನಾಪೋಕ್ಲು, ಕಡಂಗ ಈ ಭಾಗಗಳಲ್ಲಿ ಮಳೆಗಾಲದಲ್ಲಿ ಕೆಸರುಗದ್ದೆ ಫುಟ್ಬಾಲ್ ಕ್ರೀಡಾಕೂಟ ಅತೀ ಹೆಚ್ಚಾಗಿ ನಡೆಯುತ್ತದೆ.

ಕೆಸರುಗದ್ದೆ ಕ್ರೀಡಾಕೂಟಗಳಲ್ಲಿ ಆಯೋಜನೆ ಮಾಡುವ ಫುಟ್ಬಾಲ್ ಪಂದ್ಯಗಳಲ್ಲಿ ಮಾತ್ರ ಭಾಗವಹಿಸುವ ಆಟಗಾರರು ಕೂಡ ಜಿಲ್ಲೆಯಲ್ಲಿ ಇದ್ದಾರೆ. ಕ್ರೀಡಾ ತವರೂರಿನಲ್ಲಿ ಮಳೆಗಾಲದಲ್ಲಿ ಕೂಡ ಯಾವುದೇ ಬಿಡುವಿಲ್ಲದೆ ಕ್ರೀಡಾಕೂಟಗಳು ನಡೆಯುತ್ತಿದೆ. ಕೊಡಗು ಜಿಲ್ಲೆಯ ಕೆಸರುಗದ್ದೆ ಕ್ರೀಡಾಕೂಟಗಳು ರಾಜ್ಯಮಟ್ಟದಲ್ಲಿ ಹೆಸರುವಾಸಿ ಯಾಗಿದೆ. ಇನ್ನೆರಡು ತಿಂಗಳು ಕೊಡಗಿನಲ್ಲಿ ಕ್ರೀಟಾಚಟುವಟಿಕೆಗಳು ಕಾಣಬೇಕೆಂದರೆ ಕ್ರೀಡಾ ಪ್ರೇಮಿಗಳು ಗದ್ದೆಗಳತ್ತ ಮುಖಮಾಡಬೇಕಾಗಿದೆ.

- ಕೆ.ಎಂ. ಇಸ್ಮಾಯಿಲ್ ಕಂಡಕರೆ