ಕೂಡಿಗೆ, ಜು. ೨೦: ಕುಶಾಲನಗರ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ನಿರ್ದೇಶಕ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆಯು ಆರಂಭಗೊAಡಿವೆ

ತಾಲೂಕಿನ ಕೂಡು ಮಂಗಳೂರು, ಸಿದ್ಧಲಿಂಗಪುರ, ಹುದುಗೂರು, ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಸೇರಿದಂತೆ ಈ ಸಂಘಗಳಿಗೆ ನಿರ್ದೇಶಕರ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆಯು ಆಯಾ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಆರಂಭಗೊAಡಿದ್ದು ಸಹಕಾರ ಇಲಾಖೆಯ ನಿಯಮಾನುಸಾರ ಚುನಾವಣಾ ಅಧಿಕಾರಿಗಳನ್ನು ನೇಮಕ ಮಾಡಲಾಗಿ ಚುನಾವಣೆಯು ತಾ. ೩೦ ರಂದು ನಡೆಯಲಿದೆ.

ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸಾಮಾನ್ಯ ವರ್ಗ, ಮಹಿಳಾ ಮೀಸಲು ಸೇರಿದಂತೆ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ (ಎ) ಮತ್ತು (ಬಿ) ಸೇರಿದಂತೆ ವರ್ಗವಾರು ನಿರ್ದೇಶಕ ಸ್ಥಾನದ ಪಟ್ಟಿಯು ಬಿಡುಗಡೆಯಾಗಿದೆ. ಒಟ್ಟು ೧೩ ನಿರ್ದೇಶಕರ ಸ್ಥಾನಕ್ಕೆ ಚುನಾವಣೆಯು ನಡೆಯಲಿದೆ.

ತಾ. ೨೨ ರಂದು ನಾಮಪತ್ರವನ್ನು ಸಲ್ಲಿಕೆ ಮಾಡಲು ಕೊನೆಯ ದಿನವಾಗಿದ್ದು, ನಾಮಪತ್ರ ಪರಿಶೀಲನೆಯು ತಾ. ೨೩ ರಂದು. ಹಿಂಪಡೆಯಲು ತಾ. ೨೪ ಕೊನೆಯ ದಿನವಾಗಿರುತ್ತದೆ. ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳಿಗೆ ತಾ. ೩೦ ರಂದು ಚುನಾವಣೆ ನಡೆಯಲಿದೆ.

ಶಿರಂಗಾಲ ಹಾಲು ಉತ್ಪಾದಕರ ಸಂಘದಲ್ಲಿ ೧೨ ನಾಮಪತ್ರಗಳ ಸಲ್ಲಿಕೆಯಾಗಿದೆ. ಇಲ್ಲಿನ ಚುನಾವಣಾ ಅಧಿಕಾರಿ, ಶಿರಂಗಾಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೇಮಲತಾ ತಿಳಿಸಿದ್ದಾರೆ.