ಮಡಿಕೇರಿ, ಜು. ೨೦: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ೨೦೨೩-೨೪ ನೇ ಸಾಲಿಗೆ ಪ್ರಥಮ ಬಿ.ಎ ಮತ್ತು ಬಿ.ಕಾಂ ತರಗತಿಗಳಿಗೆ ಪ್ರವೇಶಾತಿ ಆರಂಭಗೊAಡಿದ್ದು, ನೂತನವಾಗಿ ಪ್ರಾರಂಭವಾಗಿರುವ ಕೊಡಗು ವಿಶ್ವ ವಿದ್ಯಾನಿಲಯದ ವ್ಯಾಪ್ತಿಗೆ ಒಳಪಡುವ ಈ ಕಾಲೇಜಿಗೆ ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿನಿಯರು ಕಚೇರಿಯಿಂದ ಅರ್ಜಿ ಪಡೆದುಕೊಂಡು ಭರ್ತಿ ಮಾಡಿ ಸೂಕ್ತ ದಾಖಲೆಗೊಂದಿಗೆ ಪ್ರವೇಶ ಪಡೆಯಲು ತಿಳಿಸಿದೆ.
ಬಿ.ಕಾಂ ತರಗತಿಗೆ ಸೇರಬಯಸುವ ೫ ಜನ ವಿದ್ಯಾರ್ಥಿನಿಯರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ತಾ. ೨೫ ಪ್ರವೇಶಾತಿ ಕೊನೆಯ ದಿನಾಂಕವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಡಿ.ಜೆ. ಜವರಪ್ಪ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ ೯೯೪೫೧೮೫೭೮೩, ೯೮೪೫೯೦೭೩೪೪, ೯೦೦೮೧೮೦೦೪೯, ೯೫೩೮೫೦೬೩೭೦ನ್ನು ಸಂಪರ್ಕಿಸಬಹುದು ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.