ಶನಿವಾರಸAತೆ, ಜು. ೨೦: ಸಮೀಪದ ಕೊಡ್ಲಿಪೇಟೆ ಕಡೇಪೇಟೆಯಲ್ಲಿ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ವ್ಯವಸ್ಥಾಪಕರಾಗಿ ೩೯ ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಕೆ.ಆರ್. ವಿರೂಪಾಕ್ಷಯ್ಯ ಅವರನ್ನು ಸಂಘದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಸಂಘದ ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಹಿರಿಯ ಸಹಕಾರಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಕೆ. ಚಿಣ್ಣಪ್ಪ ಮಾತನಾಡಿ, ಯಾವುದೇ ಸರ್ಕಾರಿ ಉದ್ಯೋಗವಾಗಲಿ ನಿವೃತ್ತಿ ಸಹಜ ಎಂದರು.

ಆಡಳಿತ ಮಂಡಳಿ ಪರವಾಗಿ ಸಂಘದ ನಿರ್ದೇಶಕ ಬಿ.ಪಿ. ಅಶೋಕ್ ಇದ್ದರು. ಸನ್ಮಾನಿತ ಕೆ.ಆರ್. ವಿರೂಪಾಕ್ಷಯ್ಯ ಮಾತನಾಡಿದರು. ಸಂಘದ ಉಪಾಧ್ಯಕ್ಷ ಭುವನೇಶ್, ನಿರ್ದೇಶಕರಾದ ಸಿ.ವಿ. ಶಂಭುಲಿAಗಪ್ಪ, ರಾಮಕೃಷ್ಣ, ಯತೀಶ್, ಶಿವಣ್ಣ, ಮೋಹನ್, ಚಿನ್ನಮಣಿ, ನೇತ್ರಾವತಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.