ಸಿದ್ದಾಪುರ, ಜು. ೨೦: ನಡುರಾತ್ರಿ ಕಾಡಾನೆಯೊಂದು ಪಟ್ಟಣದಲ್ಲಿ ಸಂಚ ರಿಸಿದ ವಿಚಾರ ಆತಂಕಕ್ಕೆ ಕಾರಣವಾಗಿದೆ.
ಬುಧವಾರ ತಡರಾತ್ರಿ ಒಂಟಿ ಸಲಗವೊಂದು ಪಾಲಿಬೆಟ್ಟ ರಸ್ತೆಯಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದು ಈ ಸಂಧರ್ಭದಲ್ಲಿ ಆ ಮಾರ್ಗವಾಗಿ ಬಂದ ಆಟೋ ರಿಕ್ಷಾ ಚಾಲಕ ಕಾಡಾನೆಯನ್ನು ಕಂಡು ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು, ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ಸಮೀಪದ ಮನೆಯ ಸಮೀಪಕ್ಕೆ ಓಡಿದ್ದಾನೆ. ಈ ಸಂದರ್ಭದಲ್ಲಿ ವಾಹನದ ಬಳಿ ದಾಳಿ ನಡೆಸಲು ಮುಂದಾದ ಕಾಡಾನೆಯು ಹಾನಿ ಪಡಿಸದೆ ಅಲ್ಲಿಂದ ತೆರಳಿದ್ದು ಅದೃಷ್ಟ ವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆ ಕಾಡಾನೆಗಳನ್ನು ಕಾಡಿ ಗಟ್ಟುವ ಕಾರ್ಯಾಚರಣೆ ನಡೆಸಿದ್ದರೂ ಕೂಡ, ಕಾಡಾನೆಗಳು ಕಾಫಿ ತೋಟಗ ಳಲ್ಲಿ ಬೀಡುಬಿಟ್ಟು ದಾಂಧಲೆ ಮುಂದು ವರಿಸುತ್ತಿರುವುದು ಕಂಡು ಬಂದಿದೆ.