ಕಡಂಗ, ಜು. ೨೦: ಕಡಂಗ ಬದ್ರಿಯಾ ಸುನ್ನೀ ಮುಸ್ಲಿಂ ಜಮಾಅತ್ ವಾರ್ಷಿಕ ಮಹಾಸಭೆ ಸ್ಥಳೀಯ ಬದ್ರಿಯಾ ಮದರಸ ಹಾಲ್‌ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಸೈನ್ ಸಖಾಫಿ ಎಮ್ಮೆಮಾಡು ವಹಿಸಿ ಮಾತನಾಡಿದರು.

ಪ್ರಾರ್ಥನೆಯನ್ನು ಕೊಡಗು ಜಿಲ್ಲಾ ನಾಇಬ್ ಖಾಝಿ ಶಾದುಲಿ ಫೈಝಿ ನೆರವೇರಿಸಿದರು. ಕಾರ್ಯ ಕ್ರಮದ ಉದ್ಘಾಟನೆಯನ್ನು ಸ್ಥಳೀಯ ಮಸೀದಿಯ ಖತೀಬ್ ಇಸ್ಮಾಯಿಲ್ ಲತೀಫಿ ನಡೆಸಿದರೆ, sಸ್ವಾಗತವನ್ನು ಅಬ್ದುಲ್ ಸಲಾಂ, ವರದಿಯನ್ನು ಕಾರ್ಯದರ್ಶಿ ಆಶಿಕ್ ನೆರವೇರಿಸಿ, ಲೆಕ್ಕ ಪತ್ರವನ್ನು ಕಾರ್ಯದರ್ಶಿ ನೌಶಾದ್ ಮಂಡಿಸಿದರು. ನಂತರ ೨೦೨೩-೨೪ನೇ ಸಾಲಿನ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಅಬ್ದುಲ್ ರೆಹಮಾನ್ ಅರಫಾ, ಉಪಾಧ್ಯಕ್ಷರಾಗಿ ಉಸ್ಮಾನ್ ಕೆ.ಇ, ಪ್ರಧಾನ ಕಾರ್ಯ ದರ್ಶಿಯಾಗಿ ರಾಶೀದ್ ಯು.ಇ, ಕೋಶಾಧಿಕಾರಿಯಾಗಿ ರಜಾಕ್ ಸಿ.ಎ, ಜಂಟಿ ಕಾರ್ಯದರ್ಶಿಯಾಗಿ ನೌಫಲ್ ಎಂ.ಬಿ ಹಾಗೂ ಕಾರ್ಯಕಾರಿಣಿ ಸದಸ್ಯರಾಗಿ ಹಾಶಿಮ್, ಕರೀಂ, ಅಶ್ರಫ್, ಸುಹೈಲ್, ರಝಕ್ ಕೆ.ಎ. ಸಹದ್ ರವರನ್ನು ಆಯ್ಕೆ ಮಾಡಲಾಯಿತು.