ಮಡಿಕೇರಿ, ಜು. ೨೦: ಕ್ಷÄಲ್ಲಕ ವಿಚಾರಕ್ಕೆ ವ್ಯಕ್ತಿಯೋರ್ವರ ಮೇಲೆ ಅವರ ಅಣ್ಣನ ಮಗ ಹಲ್ಲೆ ಮಾಡಿದ ಸಂಬAಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳುಗೋಡು ಗ್ರಾಮದ ಬಲ್ಯಮೀದೇರಿರ ಚಿಣ್ಣಪ್ಪ ಮೇಲೆ ಅವರ ಅಣ್ಣನ ಮಗ ಗಿರೀಶ್ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಚಿಣ್ಣಪ್ಪ ಆರೋಪಿಸಿದ್ದಾರೆ.
ಎರಡು ಕುಟುಂಬಗಳ ನಡುವೆ ವೈಯಕ್ತಿಕ ವಿಚಾರದಲ್ಲಿ ಮಾತುಕತೆ ಇರಲಿಲ್ಲ. ತಾ. ೧೫ ರಂದು ಕಾಫಿ ಕಣದಲ್ಲಿ ವಾಯು ವಿಹಾರ ನಡೆಸುವ ಸಂದರ್ಭ ಗಿರೀಶ್ ಅವರ ತೋಟದ ಕಾರ್ಮಿಕರೊಂದಿಗೆ ಮಾತನಾಡಿ ದನ್ನು ಮುಂದಿಟ್ಟು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಳಿಕ ಕೋವಿಯನ್ನು ತಂದು ಅದರಿಂದ ಹಲ್ಲೆ ಮಾಡಿ, ಜೀವ ಬೆದರಿಕೆ ಒಡ್ಡಿದ್ದಾರೆ. ಗಾಯಾಳು ಬಳಿಕ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.