ಕೂಡಿಗೆ, ಜು. ೨೧: ಕೂಡಿಗೆಯ ಜ್ಞಾನೋದಯ ಶಾಲೆಯ ೩೫ ವಿದ್ಯಾರ್ಥಿಗಳು ಮಾರ್ಚ್ ತಿಂಗಳಿನಲ್ಲಿ ನಡೆದ ಕರಾಟೆ ಬೆಲ್ಟ್ ಅರ್ಹತಾ ಪರೀಕ್ಷೆಯ ವಿವಿಧ ವಿಭಾಗ ಗಳಲ್ಲಿ ಭಾಗವಹಿಸಿ ಅರ್ಹತೆಯನ್ನು ಪಡೆದಿದ್ದಾರೆ. ಅರ್ಹತೆ ಪಡೆದಂತಹ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಶಾಲಾ ಮುಖ್ಯೋಪಾಧ್ಯಾಯ ಹೆಚ್.ಎನ್. ನಾಗಾಚಾರಿ ವಿತರಣೆ ಮಾಡಿದರು. ಈ ಸಂದರ್ಭ ಮುಖ್ಯೋಪಾಧ್ಯಾಯ ಹೆಚ್.ಎನ್. ನಾಗಾಚಾರಿ, ಕರಾಟೆ ತರಬೇತುದಾರ ಸಂಕೇತ್ ಹಾಗೂ ಇತರ ಶಿಕ್ಷಕರು ಉಪಸ್ಥಿತರಿದ್ದರು.