ನಾಪೋಕ್ಲು, ಜು. ೨೦ : ನಾಪೋಕ್ಲು- ಮಡಿಕೇರಿ ಮುಖ್ಯರಸ್ತೆಯ ಅಪ್ಪಂಗಳದಲ್ಲಿ ಲಾರಿಯೊಂದು ರಸ್ತೆಯಂಚಿಗೆ ಬಿದ್ದಿದ್ದು, ಚಾಲಕ ಹಾಗೂ ಸಹಾಯಕ ಅಪಾಯದಿಂದ ಪಾರಾಗಿದ್ದಾರೆ.
ನಾಪೋಕ್ಲುವಿನಿಂದ ಕುಶಾಲನಗರಕ್ಕೆ ಕಾಫಿ ಸಾಗಿಸುತ್ತಿದ್ದ ಲಾರಿ ಅಪ್ಪಂಗಳದ ಏಲಕ್ಕಿ ಸಂಶೋಧನಾ ಕೇಂದ್ರದ ಬಳಿ ಹಿಂದಕ್ಕೆ ಚಲಿಸಿ ರಸ್ತೆಯಂಚಿಗೆ ಬಿದ್ದಿದೆ.