ನಾಪೋಕ್ಲು, ಜು. ೨೧: ಬಿರುಸಿನ ಮಳೆಗೆ ನದಿತೊರೆಗಳು ಉಕ್ಕಿ ಹರಿ ಯುತ್ತಿವೆ. ಇದರೊಂದಿಗೆ ಬೆಟ್ಟ ಶ್ರೇಣಿಗಳಲ್ಲಿ ವಿವಿಧ ಜಲಪಾತಗಳು ಬೋರ್ಗ ರೆದು ಧುಮ್ಮಿಕ್ಕಿ ಹರಿ ಯುತ್ತಿವೆ. ಕಾಡಿನೊಳಗೆ ಬೆಟ್ಟ ಶ್ರೇಣಿಗಳಲ್ಲಿ ಜಲ ಧಾರೆಯಾಗಿ ಹರಿಯುವ ಜಲಪಾತಗಳು ಅವೆಷ್ಟೋ. ಹೆಚ್ಚಿನವು ಜನರ ಕಣ್ಣಿಗೆ ಬೀಳದೆ ಸಹಜ ಸೌಂದ ರ್ಯದಿಂದ ಹರಿದು ನದಿ-ಹೊಳೆಗಳನ್ನು ಸೇರುತ್ತವೆ. ಮತ್ತೆ ಕೆಲವು ಜಲಧಾರೆಗಳು ರಸ್ತೆ ಯಂಚಿನಲ್ಲೇ ಇದ್ದು ಪ್ರವಾಸಿಗರ ಮನಸೆಳೆಯುತ್ತವೆ.

ಮಡಿಕೇರಿ-ಸಂಪಾಜೆ (ಮಂಗಳೂರು) ರಾಜ್ಯ ಹೆದ್ದಾರಿಯಲ್ಲಿ ಸಾಗುವ ಮಂದಿಗೆ ಮೋಹಕ ಜಲಧಾರೆಯೊಂದು ಗೋಚರಿಸುತ್ತದೆ. ಇದು ಮದೆನಾಡು ಗ್ರಾಮದ ಜೋಡುಪಾಲ ಜಲಪಾತ. ಕೊಲ್ಲಿ ಅಬ್ಬಿ ಜಲಪಾತವೆಂದೇ ಪ್ರಸಿದ್ಧ. ಮಳೆಗಾಲದಲ್ಲಿ ಮೋಹಕ ಜಲಧಾರೆಯಾಗಿ ಕಂಗೊಳಿಸುತ್ತದೆ. ಸುಮಾರು ೫೦ ಅಡಿ ಎತ್ತರದಿಂದ ಬಂಡೆಕಲ್ಲುಗಳ ನಡುವೆ ನುಸುಳಿ ಸಾಗುವ ಈ ಜಲಪಾತ ದಾರಿಯಲ್ಲಿ ಸಾಗುವ ಪ್ರಯಾಣಿಕರ ಮನಸೆಳೆಯುತ್ತದೆ. ಇದೀಗ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಲಪಾತ ಮೈದುಂಬಿ ಹರಿಯುತ್ತಿದೆ.

- ದುಗ್ಗಳ ಸದಾನಂದ.