ಸುಂಟಿಕೊಪ್ಪ, ಜು. ೨೦: ಸಮೀಪದ ಪನ್ಯ ತೋಟದಲ್ಲಿ ಪಂಚಾಯಿತಿಯ ಶೇ.೨೫ರ ನಿಧಿಯಲ್ಲಿ ಉಲುಗುಲಿ ೧ನೇ ವಿಭಾಗದ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಕುಡಿಯುವ ನೀರು ಸಂಗ್ರಹಣೆಗಾಗಿ ಡ್ರಮ್ಗಳನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ವಿತರಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಪಿಡಿಒ ವೇಣು ಗೋಪಾಲ್, ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯರಾದ ಪಿ.ಆರ್,ಸುನಿಲ್ ಕುಮಾರ್, ಪಿ.ಎಫ್. ಸಬಾಸ್ಟೀನ್, ಆಲಿಕುಟ್ಟಿ, ನಾಗರತ್ನ, ಶಬೀರ್, ರಫೀಕ್ ಖಾನ್, ಶಾಂತಿ, ಸೋಮನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕೆ.ಪಿ. ಚಂದ್ರಕಲಾ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಪೌರ ಕಾರ್ಮಿಕರು ಸೇರಿದಂತೆ ಇತರರು ಹಾಜರಿದ್ದರು.