ಮಡಿಕೇರಿ, ಜು. ೨೦: ವೀರಾಜ ಪೇಟೆ ಕೂರ್ಗ್ ವ್ಯಾಲಿ ಶಾಲೆಯ ೨೦೨೩-೨೪ನೇ ಶೈಕ್ಷಣಿಕ ಸಾಲಿನ ಪದಗ್ರಹಣ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ. ಎಸ್.ವಿ. ನರಸಿಂಹನ್ ಪಾಲ್ಗೊಂಡಿದ್ದರು. ಆಡಳಿತ ಮಂಡಳಿಯ ನಿರ್ವಾಹಕರು ಮತ್ತು ಮುಖ್ಯ ಶಿಕ್ಷಕರಾದ ಸುಮಾ ಚಿತ್ರಬಾನು ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.
ಶಾಲೆಯ ಕರೆಸ್ಪಾಂಡೆAಟ್ ಆಗಿರುವ ಚಿತ್ರಭಾನು ಮತ್ತು ಅನ್ನಮ್ಮ ಮೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪೋಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.