ಗೋಣಿಕೊಪ್ಪ ವರದಿ, ಜು. ೨೦: ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗೆ ಜೈಲು ಶಿಕ್ಷೆ, ದಂಡ ವಿಧಿಸಿ ಪೊನ್ನಂಪೇಟೆ ನ್ಯಾಯಾಲಯ ಆದೇಶಿಸಿದೆ.

೨೦೧೯ ರಲ್ಲಿ ಗೋಣಿಕೊಪ್ಪ ನಿವಾಸಿ ಜಿ. ಪಿ. ಉದಯ ಎಂಬುವವರು ಮನೆ ಬಾಡಿಗೆದಾರ ಎಂ. ಎಂ. ಸೀತಾ ಮಂದಣ್ಣ ಎಂಬುವವರಿಗೆ ಬಾಡಿಗೆಯ ಮುಂಗಡ ಹಣವಾಗಿ ೨.೫ ಲಕ್ಷ ಚೆಕ್ ನೀಡಿದ್ದರು. ಬ್ಯಾಂಕ್ ಚೆಕ್ ಅಮಾನ್ಯಗೊಂಡ ಕಾರಣ, ಪೊನ್ನಂಪೇಟೆ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಉದಯ ಅವರ ವಿರುದ್ಧ ಚೆಕ್‌ಬೌನ್ಸ್ ಪ್ರಕರಣ ದಾಖಲಾಗಿತ್ತು. ಇದರಂತೆ ಪೊನ್ನಂಪೇಟೆ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಕೆ.ಎಸ್. ಆಶಾ ಅವರು ೬ ತಿಂಗಳ ಜೈಲು ಶಿಕ್ಷೆ, ಪಿರ್ಯಾದುರಾರರಿಗೆ ೨.೪೫ ಲಕ್ಷ ಮತ್ತು ಸರ್ಕಾರಕ್ಕೆ ೫ ಸಾವಿರ ಪಾವತಿಸುವಂತೆಯೂ, ದಂಡ ಪಾವತಿ ತಪ್ಪಿದಲ್ಲಿ ಮೂರು ತಿಂಗಳು ಹೆಚ್ಚಿನ ಜೈಲು ಶಿಕ್ಷೆ ನೀಡಿ ಆದೇಶಿಸಿದ್ದಾರೆ. ಪಿರ್ಯಾದುದಾರರ ಪರವಾಗಿ ವಕೀಲ ಬಿ. ಎಸ್. ಪುಷ್ಪರಾಜ್, ಸಿ. ಬಿ. ಅನಿತಾ ವಾದ ಮಂಡಿಸಿದ್ದರು.