ಸುಂಟಿಕೊಪ್ಪ, ಜು. ೨೦ : ಇಲ್ಲಿಗೆ ಸಮೀಪದ ಕಂಬಿಬಾಣೆ ಗ್ರಾಮ ಪಂಚಾಯಿತಿಯ ಊರುಗುಪ್ಪೆ ಪೈಸಾರಿಯಲ್ಲಿ ಕಾಡಾನೆಯೊಂದು ನಿಲ್ಲಿಸಿದ್ದ ಜೀಪ್‌ಗೆ ಕೋರೆಯಿಂದ ತಿವಿದು ಹಾನಿಪಡಿಸಿದೆ.
ಪೈಸಾರಿ ನಿವಾಸಿ ಸಲಾಂ ಎಂಬವರಿಗೆ ಸೇರಿದ ಬೊಲೆರೋ ಜೀಪನ್ನು ಎಂದಿನAತೆ ಮನೆ ಸಮೀಪದ ರಸ್ತೆ ಬದಿ ನಿಲ್ಲಿಸಲಾಗಿತ್ತು. ರಾತ್ರಿ ವೇಳೆ ದಾಳಿ ಮಾಡಿದ ಕಾಡಾನೆ ಕೋರೆಯಿಂದ ತಿವಿದ ಪರಿಣಾಮ ಜೀಪಿನ ಮುಂಭಾಗದ ಗಾಜು ಪುಡಿಯಾಗಿದೆ. ಕಂಬಿಬಾಣೆ, ಕೊಡಗರಹಳ್ಳಿ, ಎಮ್ಮೆಗುಂಡಿ ಈ ಭಾಗದಲ್ಲಿ ಪ್ರತಿನಿತ್ಯ ಆನೆಗಳು ಕಾಡಿನಿಂದ ನಾಡಿಗೆ ಲಗ್ಗೆಯಿಡುತ್ತಿದ್ದು, ಸಾರ್ವಜನಿಕರು, ತೋಟ ಕಾರ್ಮಿಕರು, ಶಾಲಾ ಮಕ್ಕಳು ಭಯದಿಂದ ಜೀವನ ದೂಡುವಂತಾಗಿದೆ. ಅರಣ್ಯ ಇಲಾಖೆಯವರು ಆನೆಯನ್ನು ಕಾಡಿಗೆ ಅಟ್ಟಿದರೆ ಅದು ಬೇರೊಂದು ಗ್ರಾಮಕ್ಕೆ ತೆರಳಿ ಗದ್ದೆ - ತೋಟವನ್ನು ಪುಡಿಗೈಯುತ್ತಿದ್ದು, ಕೃಷಿಕರ ಜೀವನ ನರಕವಾಗಿದೆ. ಅರಣ್ಯ ಇಲಾಖೆಯವರು ಆನೆಗಳನ್ನು ಕಾಡಿಗೆ ಅಟಿ ಮತ್ತೆ ನಾಡಿಗೆ ಬಾರದಂತೆ ಕ್ರಮ ಕೈಗೊಳ್ಳುವಂತೆ ಈ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.