ಸುಂಟಿಕೊಪ್ಪ, ಜು. ೨೦: ಇಲ್ಲಿನ ನಿವಾಸಿ ಕಡ್ಲೆರ ರಘು ಕುಮಾರ ಎಂಬವರ ಮನೆಗೆ ನಿನ್ನೆ ರಾತ್ರಿ ಕಾಡಾನೆಗಳ ಹಿಂಡು ನುಗ್ಗಿ ಮನೆಯ ಅಂಗಳದಲ್ಲಿರುವ ಧನದ ಕೊಟ್ಟಿಗೆಯ ಸಮೀಪ ಜಾನುವಾರುಗಳಿಗೆ ಶೇಖರಿಸಿದ ಹುಲ್ಲುಗಳನ್ನು ತಿಂದು ತೇಗಿದೆ. ಅಲ್ಲದೆ ಬಾಳೆ ತೋಟಕ್ಕೆ ನುಗ್ಗಿ ಫಸಲು ನಾಶಪಡಿಸಿದೆ.
ಕಳೆದ ೧೦ ವರ್ಷಗಳಿಂದ ಜೀವನೋಪಾಯಕ್ಕೆ ಇರುವ ಭೂಮಿಯಲ್ಲಿ ಬೆಳೆದ ಫಸಲುಗಳನ್ನು ನಾಶಪಡಿಸುತ್ತಿದ್ದು, ವರ್ಷಂಪ್ರತಿ ಹಣವ್ಯಯಮಾಡಿ ಕೃಷಿ ಬೆಳೆಸಿದರೂ ಕೈಗೆ ಬಂದ ಫಸಲು ಬಾಯಿಗೆ ಬರುತ್ತಿಲ್ಲ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ೧ ವಾರದಿಂದ ಕಾಡಾನೆಗಳ ಹಿಂಡು ಈ ಭಾಗದಲ್ಲಿ ತೋಟಗಳಿಗೆ ಲಗ್ಗೆ ಇಟ್ಟು ದಾಂಧಲೆ ನಡೆಸುತ್ತಿದ್ದು, ಬಹುತೇಕ ತೋಟಗಳಲ್ಲಿ ಕಾಡಾನೆಗಳು ವಾಸ್ತವ್ಯ ಹೂಡಿರುತ್ತದೆ. ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯ ಕೈಗೊಂಡರೂ ಮರುದಿನ ಮತ್ತೆ ಪ್ರತ್ಯಕ್ಷವಾಗುತ್ತಿದೆ. ಇದರಿಂದ ಗ್ರಾಮಸ್ಥರು ತೀವ್ರ ಆತಂಕಗೊAಡಿದ್ದಾರೆ. ಇಲಾಖೆ ಈ ಭಾಗಗಳಲ್ಲಿ ನಿರಂತರ ಕಾಡಾನೆಗಳನ್ನು ಅಟ್ಟುವ ಕಾರ್ಯ ಮುಂದುವರಿಸುವAತೆ ಹಾಗೂ ಸರಕಾರದಿಂದ ನಷ್ಟ ಪರಿಹಾರ ನೀಡುವಂತೆ ರಘು ಕುಮಾರ ಒತ್ತಾಯಿಸಿದ್ದಾರೆ.