ಮಡಿಕೇರಿ, ಜು. ೨೦: ಕಳೆದ ಆರು ತಿಂಗಳಿAದ ಕೊಡಗು ಜಿಲ್ಲೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಎಸ್. ಎನ್. ಮಧುರಾ ಅವರನ್ನು ಚಿಕ್ಕಮಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಕೊಡಗು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಆಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದ
ವಿ. ನಾಗರಾಜ ಆಚಾರ್ ಅವರನ್ನು ನೇಮಕಗೊಳಿಸಿ ಸಾರಿಗೆ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ತಾ. ೧೪ರಂದು ಈ ಆದೇಶ ಹೊರ ಬಂದಿದ್ದು ನಿನ್ನೆ ನೂತನ ಆರ್ಟಿಓ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.