ಚೆಟ್ಟಳ್ಳಿ, ಜು. ೧೯ : ಕೇಂದ್ರದ ಮಾಜಿ ಸಚಿವ ಹಾಗೂ ಆರ್ಥಿಕ ತಜ್ಞ ಡಾ. ಸುಬ್ರಮಣಿಯನ್ ಸ್ವಾಮಿ ಅವರು ತಮ್ಮ ರಾಜ್ಯಸಭಾ ನಿಧಿಯಿಂದ ಕೊಡಗು ಜಿಲ್ಲೆಗೆ ನೀಡಿದ ಅನುದಾನದಲ್ಲಿ ನೂರುಕ್ಕನಾಡ್ ಹಿಲ್ಸ್-ಕತ್ತಲೆಕಾಡು ರಸ್ತೆ ಅಭಿವೃದ್ಧಿಯಾಗಿದೆ.
ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಾಂಕ್ರಿಟ್ ರಸ್ತೆಯನ್ನು ಡಾ.ಸುಬ್ರಮಣಿಯನ್ ಸ್ವಾಮಿ ಅವರ ಆಪ್ತ ಹಾಗೂ ವಿಹೆಚ್‌ಎಸ್‌ನ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕೊಡವರು ಹಾಗೂ ಕೊಡಗಿನ ಮೇಲಿನ ಅಭಿಮಾನ ಮತ್ತು ಪ್ರೀತಿಯಿಂದ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಅನುದಾನ ನೀಡಿದ್ದಾರೆ. ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ಪ್ರಯತ್ನದ ಫಲವಾಗಿ ಇಂದು ರಸ್ತೆ ನಿರ್ಮಾಣಗೊಂಡಿದೆ. ಗ್ರಾಮಸ್ಥರು ಕಾಮಗಾರಿಯ ಬಗ್ಗೆ ಹೆಚ್ಚು ಆಸಕ್ತಿ ತೋರಿ ತಮ್ಮನ್ನು ತಾವು ತೊಡಗಿಸಿಕೊಂಡ ಕಾರಣ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾಗಿದೆ ಎಂದರು.
ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ ಕೊಡಗು ಹಿಂದೆ ಕೂರ್ಗ್ ರಾಜ್ಯವಾಗಿದ್ದಾಗ ಅಭಿವೃದ್ಧಿ ಕಾರ್ಯಗಳು ಗುಣಮಟ್ಟದಿಂದ ಕೂಡಿರುತ್ತಿತ್ತು. ಕರ್ನಾಟಕದೊಂದಿಗೆ ವಿಲೀನವಾಗಿ ಜಿಲ್ಲೆಯಾಗಿ ಪರಿವರ್ತನೆಯಾದ ನಂತರ ಕಮಿಷನ್ ಆಧಾರದ ಕಳಪೆ ಕಾಮಗಾರಿಗಳು ನಡೆದಿವೆ. ಆದರೆ ನೂರುಕ್ಕನಾಡ್ ಹಿಲ್ಸ್-ಕತ್ತಲೆಕಾಡು ರಸ್ತೆ ಕಾಮಗಾರಿ ಯಾವುದೇ ಕಮಿಷನ್‌ಗೆ ಅವಕಾಶವಿಲ್ಲದೆ ಉತ್ತಮ ಗುಣಮಟ್ಟದಿಂದ ನಿರ್ಮಾಣಗೊಂಡಿದೆ ಎಂದರು.
ಕೋರಿಕೆಯ ಮೇರೆಗೆ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಸಂಸತ್ ಸದಸ್ಯರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯ ನಿಧಿಯಡಿ ಕೊಡಗಿನ ಕುಗ್ರಾಮಗಳ “ಬಲ್ಯಮನೆ” ರಸ್ತೆ ಮತ್ತು ಇತರ ರಸ್ತೆಗಳ ಅಭಿವೃದ್ಧಿಗೆ ೨.೪೬ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದರು. ಮೊದಲ ಹಂತದಲ್ಲಿ ನೂರುಕ್ಕನಾಡ್ ಹಿಲ್ಸ್-ಕತ್ತಲೆಕಾಡು ರಸ್ತೆ ನಿರ್ಮಾಣವಾಗಿದೆ ಎಂದು ನಾಚಪ್ಪ ಹೇಳಿದರು.
ವೀರರ ಸಂಕೇತವಾದ ಕೊಡವರ ಸಾಂಪ್ರದಾಯಿಕ ಕೋವಿ ಮೂಲಕ ಗಾಳಿಯಲ್ಲಿ ಗುಂಡು ಹಾರಿಸಿ ರಸ್ತೆಯನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಜಗದೀಶ್ ಶೆಟ್ಟಿ, ಎನ್.ಯು.ನಾಚಪ್ಪ, ರಸ್ತೆ ನಿರ್ಮಿಸಿದ ಗುತ್ತಿಗೆದಾರರಾದ ಜಯಚಂದ್ರೇಗೌಡ, ಮಾದಪ್ಪ ಹಾಗೂ ನಿಗಾ ವಹಿಸಿದ ಗ್ರಾಮದ ಪ್ರಮುಖ ಜನಾರ್ಧನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಚೆಟ್ಟಳ್ಳಿ ಗ್ರಾ.ಪಂ ಅಧ್ಯಕ್ಷ ಮುತ್ತಪ್ಪ, ಸದಸ್ಯೆ ಪೊರಿಮಂಡ ತಂಗಮ್ಮ ಲೋಕೇಶ್, ಪ್ರಮುಖರಾದ ಪುಲ್ಲೇರ ಕಾಳಪ್ಪ, ಪುಲ್ಲೇರ ಸ್ವಾತಿ ಕಾಳಪ್ಪ, ಚೋಳಪಂಡ ಜ್ಯೋತಿ ನಾಣಯ್ಯ, ಅರೆಯಡ ಸವಿತಾ ಗಿರೀಶ್, ನಂದೇಟಿರ ಕವಿತ ರವಿ, ರಮಣಿ ಶೇಷಪ್ಪ, ಪೂರ್ಣಿಮಾ ಶೆಟ್ಟಿ, ಆಸ್ನ ಶೆಟ್ಟಿ, ವಿಜೇಂದ್ರ ಶೆಟ್ಟಿ, ಅರೆಯಡ ಗಿರೀಶ್, ನಂದಿನೆರವAಡ ನಂದ, ನಂದಿನೆರವAಡ ದಿನೇಶ್, ಕುಮುದ, ಪೂವಪ್ಪ, ಜನಾರ್ಧನ, ಜನತ್, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.