ಮಡಿಕೇರಿ, ಜು. ೧೯: ಮೈಸೂರಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದೆ. ಹೀಗಾಗಿ ಆಗಾಗ್ಗೆ ಕೊಡಗಿಗೆ ಭೇಟಿ ನೀಡುತ್ತಿದ್ದೆ. ಮಡಿಕೇರಿಯ ದಸರಾ ಉತ್ಸವಕ್ಕೂ ಭೇಟಿ ನೀಡಿದ್ದೇನೆ. ಬಹಳ ಸುಂದರವಾದ ಜಿಲ್ಲೆ ಇದಾಗಿದೆ. ಆದರೆ ಇದೇ ಮೊದಲ ಬಾರಿಗೆ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಭೇಟಿ ನೀಡಿರುವೆ. ಸೇನೆಯಲ್ಲಿರುವ ಕೊಡಗಿನ ಸೈನಿಕರ ಸಾಹಸಗಾಥೆಯನ್ನು ಸೈನಿಕ ಶಾಲೆಯಲ್ಲಿ ಓದುತ್ತಿದ್ದ ಸಂದರ್ಭ ಸಹಪಾಠಿಗಳಿಂದ ಕೇಳಿ ತಿಳಿದಿದ್ದೆ. ಆದರೆ ಭಾರತದ ಪಾಲಿಗೆ ಮಹಾನ್ ಸೇನಾಧಿಕಾರಿಯಾಗಿದ್ದ ಜನರಲ್ ತಿಮ್ಮಯ್ಯ ಅವರ ಜೀವನ, ಸೇನಾ ಸಾಧನೆಗಳ ಬಗ್ಗೆ ಪ್ರತ್ಯಕ್ಷವಾಗಿ ವಸ್ತು ಸಂಗ್ರಹಾಲಯದಲ್ಲಿ ವೀಕ್ಷಿಸಿ ಸಂತೋಷವಾಗಿದೆ. ವಿದೇಶಗಳಲ್ಲಿಯೂ ಭಾರತದ ಕೀರ್ತಿ ಪತಾಕೆ ಹಾರಿಸಿರುವ ತಿಮ್ಮಯ್ಯ ಅವರ ಜನ್ಮ ನಿವಾಸದಲ್ಲಿಯೇ ಆ ಮಹಾನ್ ಸೇನಾನಿಗೆ ಗೌರವ ನಮನ ಸಲ್ಲಿಸುವ ಅಪೂರ್ವ ಅವಕಾಶ ನನ್ನದಾಗಿದೆ.
ಉತ್ತಮ ರೀತಿಯಲ್ಲಿ ವಸ್ತು ಸಂಗ್ರಹಾಲಯ ನಿರ್ವಹಿಸಲ್ಪಟ್ಟಿದೆ. ಇಂಥ ವಸ್ತು ಸಂಗ್ರಹಾಲಯವನ್ನು ದೇಶದ ಮಹಾನ್ ಸೇನಾನಿ ಸ್ಮಾರಕವಾಗಿ ರೂಪಿಸಿದವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಮಾಜವಾದಿ ಪಕ್ಷದ ರಾಷ್ಟಿçÃಯ ಅಧ್ಯಕ್ಷ ಅಖಿಲೇಶ್ ಯಾದವ್ ಹೆಮ್ಮೆಯಿಂದ ಹೇಳಿದರು.
ಬೆಂಗಳೂರಿನಲ್ಲಿ ೨ ದಿನಗಳ ಕಾಲ ನಡೆದ ವಿಪಕ್ಷ ನಾಯಕರುಗಳ ಸಭೆ ಬಳಿಕ ಅವರು ಕೊಡಗಿಗೆ ಆಗಮಿಸಿ ಖಾಸಗಿ ರೆಸಾರ್ಟ್ನಲ್ಲಿ ತಂಗಿದ್ದರು. ಇಂದು ತಿಮ್ಮಯ್ಯ ಮ್ಯೂಸಿಯಂ ಭೇಟಿ ಸಂದರ್ಭ ಸಮಾಜವಾದಿ ಪಕ್ಷದ ರಾಷ್ಟಿçÃಯ ವಕ್ತಾರ ರಾಜೇಂದ್ರ ಚೌಧುರಿ ಹಾಜರಿದ್ದರು. ಮ್ಯೂಸಿಯಂ ವ್ಯವಸ್ಥಾಪಕ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ ಮ್ಯೂಸಿಯಂ ಬಗ್ಗೆ ಯಾದವ್ ಅವರಿಗೆ ಸಮಗ್ರ ಮಾಹಿತಿ ನೀಡಿದರು. ಅಖಿಲೇಶ್ ಯಾದವ್ ಭೇಟಿ ಹಿನ್ನಲೆಯಲ್ಲಿ ತಿಮ್ಮಯ್ಯ ಮ್ಯೂಸಿಯಂ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.