ಸೋಮವಾರಪೇಟೆ, ಜು. ೧೯: ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯ ಮೂಲಕ ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹೈಟೆಕ್ ಮಾರುಕಟ್ಟೆಯ ಆವರಣ ಕೆಸರಿನ ಕೊಂಪೆಯAತಾಗಿದೆ.

ಮಾರುಕಟ್ಟೆಗೆ ತೆರಳುವ ಎರಡೂ ಮಾರ್ಗಗಳಲ್ಲಿ ಕೆಸರು ತುಂಬಿಕೊAಡಿದ್ದು, ಕೆಸರಿನ ಸಿಂಚನದೊAದಿಗೆ ಮಾರುಕಟ್ಟೆಗೆ ಹೋಗಬೇಕಾಗಿದೆ. ಪಟ್ಟಣದ ಕ್ಲಬ್‌ರಸ್ತೆಯಿಂದ ಹಾಗೂ ಸಿ.ಕೆ. ಸುಬ್ಬಯ್ಯ ರಸ್ತೆಯಿಂದ ಮಾರುಕಟ್ಟೆ ಪ್ರವೇಶಿಸುವ ಮಾರ್ಗಗಳಲ್ಲಿ ಕೆಸರು ತುಂಬಿಕೊAಡಿದ್ದು, ಸ್ಥಳೀಯಾಡಳಿತದ ವಿರುದ್ಧ ಅಸಮಧಾನ ವ್ಯಕ್ತಪಡಿಸುತ್ತಾ ಗ್ರಾಹಕರು ಹಾಗೂ ವರ್ತಕರು ಸಂಚರಿಸುತ್ತಿದ್ದಾರೆ. ಇದೀಗ ಮಳೆಗಾಲವಾಗಿರುವ ಹಿನ್ನೆಲೆ ಮಾರುಕಟ್ಟೆ ಪ್ರವೇಶಿಸಲು ಹರಸಾಹಸ ಪಡುವಂತಾಗಿದೆ. ಹೆಸರಿಗಷ್ಟೇ ಹೈಟೆಕ್ ಆಗಿರುವ ಮಾರುಕಟ್ಟೆಯ ಮೇಲ್ಛಾವಣಿಯ ಕೆಲವು ಕಡೆಗಳಲ್ಲಿ ಮಳೆ ನೀರು ಸೋರಿಕೆಯಾಗುತ್ತಿರುವುದು ಒಂದೆಡೆಯಾದರೆ, ಮಾರುಕಟ್ಟೆಯ ಒಳಗೆ ತೆರಳಲು ಇರುವ ಪ್ರಮುಖ ಮಾರ್ಗಗಳೂ ಸಹ ಕೆಸರಿನಿಂದ ಆವೃತ್ತವಾಗಿದೆ.

ಇತ್ತೀಚೆಗಷ್ಟೇ ಪಟ್ಟಣ ಪಂಚಾಯಿತಿಯು ಮಾರುಕಟ್ಟೆ ಆವರಣದಲ್ಲಿ ಗುಂಡಿಗಳನ್ನು ತೆಗೆದು ತ್ಯಾಜ್ಯ ವಿಲೇವಾರಿ ಮಾಡಿದ್ದು, ಈ ಗುಂಡಿಗಳ ಮಣ್ಣನ್ನು ಅಲ್ಲಲ್ಲಿ ಬಿಟ್ಟಿರುವುದರಿಂದ ಇದೀಗ ಕೆಸರು ತುಂಬಿಕೊAಡಿದೆ. ಪರಿಣಾಮ ಹಲವಷ್ಟು ಗ್ರಾಹಕರು ಬಿದ್ದು ಎದ್ದು ಬರುತ್ತಿದ್ದಾರೆ. ಮಾರುಕಟ್ಟೆಯನ್ನು ಸುಸ್ಥಿತಿಯಲ್ಲಿ ಇಡುವಲ್ಲಿ ವಿಫಲವಾಗಿರುವ ಪಟ್ಟಣ ಪಂಚಾಯಿತಿ ಬಗ್ಗೆ ಗಮನ ಹರಿಸಿ ಕೆಸರಿನ ಸಂತೆ ಮಾರುಕಟ್ಟೆಯಿಂದ ಮುಕ್ತಿ ನೀಡಬೇಕಾಗಿದೆ.