ಸದ್ಯದಲ್ಲಿ ಆದೇಶ
ಮಡಿಕೇರಿ, ಜು. ೧೯: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ಮೊಬೈಲ್ ಬಳಕೆಯಿಂದ ಆಗುತ್ತಿರುವ ಕಿರಿಕಿರಿಯನ್ನು ತಪ್ಪಿಸಲು ಮೊಬೈಲ್ ನಿಷೇಧಕ್ಕೆ ಸರಕಾರ ಮುಂದಾಗಿದೆ.
ಈ ಕುರಿತು ಕಂದಾಯ ಇಲಾಖೆ (ಧಾರ್ಮಿಕ ದತ್ತಿ) ತಾ. ೧೭ ರಂದು ಸೂಚನೆ ಹೊರಡಿಸಿದೆ. ಇದರಂತೆ ಕೊಡಗಿನ ಮುಜರಾಯಿ ದೇಗುಲಗಳಲ್ಲಿಯೂ ಈ ಆದೇಶ ಜಾರಿಯಾಗಲಿದೆ. ಈ ಬಗ್ಗೆ ಪ್ರಸ್ತುತ ಆಡಳಿತಾಧಿಕಾರಿಯಾಗಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಯಿಸಿದ್ದು, ಅಧಿಕೃತವಾಗಿ ಆದೇಶ ಜಾರಿಗೊಳಿಸಲಿರುವುದಾಗಿ ತಿಳಿಸಿದರು.
ಕೊಡಗಿನಲ್ಲಿ ಶ್ರೀ ಓಂಕಾರೇಶ್ವರ (ಕೋಟೆ ಗಣಪತಿ-ಆಂಜನೇಯ ದೇಗುಲ), ಪಾಡಿ ಶ್ರೀ ಇಗ್ಗುತಪ್ಪ, ಪಾಲೂರು ಮಹಾಲಿಂಗೇಶ್ವರ, ಪಾಲೂರು ಹರೀಶ್ಚಂದ್ರ, ರಾಜರ ಗದ್ದುಗೆ, ತಲಕಾವೇರಿ-ಭಾಗಮಂಡಲ ಹಾಗೂ ಇರ್ಪು ಶ್ರೀ ರಾಮೇಶ್ವರ ದೇವಸ್ಥಾನಗಳು ಧಾರ್ಮಿಕ ದತ್ತಿ ಇಲಾಖೆಯ ಅಧೀನಕ್ಕೆ ಒಳಪಡಲಿದೆ.