ದೇವತೆಗಳ ಆವಾಸಸ್ಥಾನವೆಂದೇ ಪ್ರಸಿದ್ಧಿ ಹೊಂದಿರುವ ಮಾನಸ ಸರೋವರಕ್ಕೆ ಯಾತ್ರಾರ್ಥಿಗಳು ತೆರಳಲು ಇನ್ನು ಕೆಲವೇ ತಿಂಗಳುಗಳಲ್ಲಿ ಸುಲಭವಾಗಲಿದೆ. ಇಷ್ಟು ದಿನ ಚೀನಾ ಹಾಗೂ ನೇಪಾಳ ದೇಶಗಳ ಕಟುವಾದ ಮಾರ್ಗದಿಂದಲೇ ಅಲ್ಲಿಗೆ ತೆರಳಬೇಕಿತ್ತು. ಆದರಿದೀಗ ಭಾರತದ ಉತ್ತರ ರಾಜ್ಯವಾದ ಉತ್ತರಾಖಂಡದಿAದಲೇ ಮಾನಸ ಸರೋವರ ಯಾತ್ರೆ ಕೈಗೊಳ್ಳಬಹುದೆಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗಷ್ಟೆ ಪ್ರಕಟಿಸಿದ್ದಾರೆ. ಈಗಾಗಲೇ ಉತ್ತರಾಖಂಡದ ಪಿತ್ತೋರ್‌ಘರ್ ಮೂಲಕ ಸಾಗಲು ರಸ್ತೆ ಮಾರ್ಗ ನಿರ್ಮಾಣಗೊಳ್ಳುತ್ತಿದ್ದು, ಶೇ.೮೫ ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ೨೦೨೩ರ ಅಂತ್ಯಕ್ಕೆ ರಸ್ತೆಯನ್ನು ಸಾರ್ವಜನಿಕರಿಗೆ ಲೋಕಾರ್ಪಣೆಗೊಳಿಸಲಾಗುವುದಾಗಿ ಮಾಹಿತಿಯಿತ್ತಿದ್ದಾರೆ.
ಸಮುದ್ರ ಮಟ್ಟದಿಂದ ೧೫,೦೯೦ ಅಡಿ ಎತ್ತರ, ಚೀನಾ ಆಕ್ರಮಿತ ಟಿಬೇಟ್ ಪ್ರದೇಶದಲ್ಲಿರುವ ಈ ಸರೋವರವು ಹಿಂದೂ, ಜೈನ, ಬುದ್ಧ ಸಮುದಾಯದವರಿಗೆ ಅವರುಗಳದ್ದೇ ಆದ ಪುರಾಣ ಇತಿಹಾಸಕ್ಕನುಗುಣವಾಗಿರುವ ಪವಿತ್ರ ಸ್ಥಳವಾಗಿದೆ. ೮೮ ಕಿ.ಮೀ ಸುತ್ತಳತೆ ಹೊಂದಿರುವ ಸರೋವರದ ಆಳ ಸುಮಾರು ೩೦೦ ಅಡಿ. ಮಾನಸ ಸರೋವರವು ಉತ್ತರ ಭಾರತದ ಪ್ರಮುಖ ನದಿಗಳಾದ ಬ್ರಹ್ಮಪುತ್ರ, ಇಂದಸ್, ಕರ್ನಾಲಿ ನದಿಗಳ ಮೂಲಗಳ ಸಮೀಪವೆ ನೆಲೆ ನಿಂತಿದೆ. ಇದರ ಸಮೀಪವೇ ಹಿಂದೂ ಧರ್ಮದ ಪ್ರಕಾರ ಶಿವನ ವಾಸಸ್ಥಾನವೆಂದು ಪರಿಗಣಿಸಲ್ಪಡುವ ಕೈಲಾಸ ಪರ್ವತ ಕೂಡ ಇದೆ. ಈಗಿರುವ ೨ ಮಾರ್ಗಗಳು
ಮೊದಲ ಮಾರ್ಗ ಇಂಡೋ-ಚೀನಾ ಗಡಿಯ ಸಿಕ್ಕಿಂನಲ್ಲಿರುವ ನಾಥು ಲಾ ಪಾಸ್ ಮೂಲಕ ಹಾದು ಹೋಗುತ್ತದೆ. ೧೪,೪೫೦ ಅಡಿ ಎತ್ತರದಲ್ಲಿರುವ ಈ ದಾರಿಯು ಸಿಕ್ಕಿಂ ಅನ್ನು ಟಿಬೇಟ್‌ನ ಚೀನಾ ಆಕ್ರಮಿತ ಪ್ರದೇಶದೊಂದಿಗೆ ಸಂಪರ್ಕಿಸುತ್ತದೆ.
ಮತ್ತೊಂದು ಮಾರ್ಗವು ಲಿಪು ಲೇಖ್ ಪಾಸ್ ಮೂಲಕ ಉತ್ತರಾಖಂಡದ ಕುಮಾನ್ ಪ್ರದೇಶವನ್ನು ಟಿಬೇಟ್‌ನ ಹಳೆಯ ಪ್ರದೇಶವಾದ ತಕ್ಲಕೋಟ್‌ನೊಂದಿಗೆ ಸಂಪರ್ಕಿಸುತ್ತದೆ. ೧೭,೫೦೦ ಅಡಿ ಎತ್ತರದಲ್ಲಿರುವ ಈ ಹಾದಿಯಲ್ಲಿ ಪ್ರವಾಸಿಗರಿಗೆ ತಂಗಲು ಜಾಗವಿಲ್ಲ., ಹಾಗೂ ದೈಹಿಕವಾಗಿ ಸದೃಢವಾಗಿರುವವರಿಗೆ ಮಾತ್ರ ಇಲ್ಲಿ ಸಾಗಲು ಸಾಧ್ಯ. ಇವೆರಡೂ ಮಾರ್ಗಗಳ ಮೂಲಕ ೨೩ ರಿಂದ ೨೫ ದಿನಗಳ ಯಾತ್ರಾ ಅವಧಿ ಅಗತ್ಯವಿದೆ.
ಹೊಸ ಮಾರ್ಗದಲ್ಲಿ ಚೀನಾ, ನೇಪಾಳ ರಸ್ತೆಗಳನ್ನು ಅನುಸರಿಸುವ ಅಗತ್ಯವಿಲ್ಲ
ಉತ್ತರಾಖಂಡದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಮಾರ್ಗವು ಅನೇಕ ಯಾತ್ರಾರ್ಥಿಗಳಿಗೆ ಸಹಕಾರಿಯಾಗಲಿದೆ. ಕಡಿದಾದ, ದುರ್ಗಮ ರಸ್ತೆಯಲ್ಲಿ ಸಂಚರಿಸುವುದು ತಪ್ಪಲಿದೆ. ಈ ಭಾಗದಲ್ಲಿ ಪ್ರತಿ ವರ್ಷ ಅಲ್ಲಲ್ಲಿ ಹವಾಮಾನ ವೈಪರೀತ್ಯ ಸೇರಿದಂತೆ ವಿವಿಧ ಅವಘಡಗಳು ಸಂಭವಿಸುತ್ತಿದ್ದವು. ಜತೆಗೆ ವಸತಿ ವ್ಯವಸ್ಥೆ ಕೂಡ ಇರುತ್ತಿರಲಿಲ್ಲ. ಹೊಸ ಮಾರ್ಗವು ಸುರಕ್ಷಿತವಾಗಿರಲಿದ್ದು, ೧ ವಾರದಲ್ಲೇ ಯಾತ್ರೆ ಮುಗಿಸಬಹುದಾಗಿದೆ. ಉತ್ತರಾಖಂಡದಿAದÀ ಕೈಲಾಸÀ ಮಾನಸ ಸರೋವರಕ್ಕೆ ಹೊಸ ಮಾರ್ಗದ ಮೂಲಕ ಹೋಗಬಹುದು. ಮೊದಲನೆಯದಾಗಿ ಪಿಥೋರಗಡ್‌ನಿಂದ ತವಾಘಾಟ್‌ಗೆ (೧೦೭.೬ ಕಿಮೀ ಉದ್ದದ ರಸ್ತೆ) ತೆರಳಬೇಕು. ಅನಂತರ ೨ನೆ ಮಾರ್ಗವು ತವಾಘಾಟ್‌ನಿಂದ ಘಾಟಿಯಬ್‌ಘಟಡ್‌ಗೆ (೧೯.೫ ಕಿಮೀ ಏಕಪಥ ರಸ್ತೆ) ಹೋಗಬೇಕು. ಮೂರನೆಯದ್ದು ಚೀನಾ ಗಡಿಯಲ್ಲಿರುವ ಘಾಟಿಯಾಬ್‌ಗಡ್‌ನಿಂದ ಲಿಪುಲೇಖ್ ಪಾಸ್‌ವರೆಗೆ (೮೦ ಕಿಮೀ) ತೆರಳಿ ಇಲ್ಲಿಂದ ಸರೋವರವನ್ನು ತಲುಪಬಹುದು.
ಪ್ರಸ್ತುತ ಇರುವ ೨ ಮಾರ್ಗಗಳು ಕೂಡ ಶೇ.೮೦ ಚೀನಾ ರಸ್ತೆಗಳನ್ನು ಅನುಸರಿಸುತ್ತವೆ. ಆದರೆ ಹೊಸ ಮಾರ್ಗವು ಶೇ.೨೦ ರಷ್ಟು ಮಾತ್ರ ಚೀನಾ ರಸ್ತೆಯನ್ನು ಅನುಸರಿಸುತ್ತದೆ. ಉಳಿದ ಶೇ.೮೦ ರಷ್ಟು ಮಾರ್ಗ ಉತ್ತರಾಖಂಡದಲ್ಲೇ ಇರಲಿದೆ. ಕಾಲ್ನಡಿಗೆಯ ಮಾರ್ಗವು ಅತ್ಯಂತ ಸರಳ ಹಾಗೂ ಕಡಿಮೆ ಅವಧಿಯದ್ದಾಗಲಿದೆ.