ಮಡಿಕೇರಿ, ಜು. ೧೭ : ಮಂಜುಮುಸುಕಿದ ಆಗಸದಡಿಯಲ್ಲಿ ಹಸಿರು ಬಣ್ಣದ ಫಳಫÀಳನೆ ಹೊಳೆಯುವ ಸುಂದರ ಕೆರೆ, ಈ ಕೆರೆಯೊಳಗೆ ತಮ್ಮ ಸಾಮರ್ಥ್ಯ ಮೀರಿ ಎಂಬAತೆ ಬೆಳೆದು ನಿಂತಿರುವ ಮರಗಳ ಸಾಲು, ಇನ್ನು ಈ ಪ್ರಕೃತಿಯ ಸೊಬಗಿನಲ್ಲಿ ಅಲ್ಲಲ್ಲಿ ಮೆಲ್ಲಗೆ ತಲೆಎತ್ತುವ ಜಲಚರಗಳು, ಆಮೆಗಳು ಹಾಗೂ ಎಲ್ಲಿಂದಲೋ ತಪ್ಪಿಸಿಕೊಂಡು ಬಂದAತೆ ಈಜಾಡುತ್ತಿದ್ದ ಪುಟ್ಟ ಬಾತುಕೋಳಿ - ಪ್ರಕೃತಿಯ ಈ ಪ್ರಶಾಂತತೆ ಕಂಡಿದ್ದು ಗಾಳಿಬೀಡಿನಲ್ಲಿರುವ ಚಪ್ಪಂಡ ಕೆರೆಯಲ್ಲಿ.

ಜಿಲ್ಲೆಯ ಹೆಚ್ಚಿನವರಿಗೆ ಇನ್ನೂ ಪರಿಚಯವಿಲ್ಲದ ಈ ಪ್ರಶಾಂತ ಕೆರೆಯನ್ನು ಇದೀಗ ಗಾಳಿಬೀಡು ಪಂಚಾಯಿತಿ, ಅಮೃತ ಸರೋವರ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮಕ್ಕೆ ತೆರೆದಿಡುವ ಸಲುವಾಗಿ ಕಾರ್ಯೋನ್ಮುಖವಾಗಿದೆ. ಸುಮಾರು ೧.೭೫ ಎಕರೆ ವಿಸ್ತೀರ್ಣದಲ್ಲಿ ಕೆರೆ ಇದ್ದು, ಕೆರೆ ಸೇರಿದಂತೆ ಸುತ್ತಲಿನ ೩ ಎಕರೆ ಜಾಗವನ್ನು ಪಂಚಾಯಿತಿ ವತಿಯಿಂದ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಪ್ರಕೃತಿಯ ಮುಗ್ಧತೆಗೆ ಧಕ್ಕೆ ಬಾರದ ಹಾಗೆ ನೋಡಿಕೊಂಡಲ್ಲಿ, ಇದು ಅತ್ಯಂತ ರಮಣೀಯ ಜಾಗವಾಗಿ ಹೊರಹೊಮ್ಮುವದರಲ್ಲಿ ಯಾವದೇ ಸಂಶಯವಿಲ್ಲ.

ಗಾಳಿಬೀಡು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಶಶಿಕಿರಣ ಪ್ರಕಾರ ಈ ಚಪ್ಪಂಡ ಕೆರೆಯನ್ನು ಸುಮಾರು ರೂ. ೪೦ ಲಕ್ಷ ಅನುದಾನದಲ್ಲಿ ಕೇಂದ್ರ ಸರಕಾರದ ಅಮೃತ ಸರೋವರ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಮೂಲಕ ರೂ. ೨೦ ಲಕ್ಷ ಹೂಡಿಕೆಯಲ್ಲಿ ಈ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಯನ್ನು, ಹೊಳೆಯ

(ಮೊದಲ ಪುಟದಿಂದ) ಸುತ್ತ ಕಲ್ಲು ಪೇರಿಸುವ ಕಾಮಗಾರಿ ಹಾಗೂ ಬಂಡ್ ರಚನೆಯ ಕಾವiಗಾರಿಗಳನ್ನು ಈಗಾಗಲೆ ಕೈಗೊಳ್ಳಲಾಗಿದೆ. ಇದಲ್ಲದೆ, ಈ ಕೆರೆಯ ಸುತ್ತ ನಡಿಗೆ ಮಾರ್ಗವನ್ನು ಹಾಗೂ ಕೆರೆಯ ಒಂದು ಬದಿಯಲ್ಲಿ ಕೆರೆಯ ವೀಕ್ಷಣೆಗೆ ಒಂದು ‘ವ್ಯೂ ಪಾಯಿಂಟ್’ ಕೂಡ ನಿರ್ಮಿಸಲಾಗಿದೆ. ಇದಕ್ಕೆ ತಾಲೂಕು ಪಂಚಾಯಿತಿಯಿAದ ರೂ. ೧೦ ಲಕ್ಷ ಬಳಕೆಯಾಗಿದೆ ಹಾಗೂ ಜಿಲ್ಲಾ ಪಂಚಾಯಿತಿ ಒದಗಿಸಿರುವ ರೂ. ೧೦ ಲಕ್ಷದಲ್ಲಿ ಕೆರೆಯ ಸುತ್ತ ಹಾಗೂ ಮರಗಳು ನಿಂತಿರುವ ದ್ವೀಪದ ಸುತ್ತ ಕಲ್ಲು ಹೇರುವ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ.

“ಇನ್ನು ಈ ಕೆರೆಯ ಜಾಗದಲ್ಲಿ ಕಾಂಕ್ರೀಟ್ ಚರಂಡಿಗಳು, ಒಂದು ಉದ್ಯಾನವನ ಹಾಗೂ ವಾಹನ ನಿಲುಗಡೆ ಸ್ಥಳ ನಿರ್ಮಾಣ ಕೆಲಸಗಳು ಬಾಕಿ ಇವೆ. ಕೆರೆಯಿಂದ ಹೂಳುತೆಗೆದು ಕೆರೆಯ ಇನ್ನೊಂದು ಬದಿಯಲ್ಲಿ ಹೂಳು ಹಾಕಲಾಗಿದೆ. ಈ ಮಳೆಗಾಲದ ನಂತರ ಬಾಕಿ ಇರುವ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಲಾಗುವದು,” ಎಂದು ಶಶಿಕಿರಣ ಅವರು ಮಾಹಿತಿ ಇತ್ತಿದ್ದಾರೆ. ಈ ಕೆರೆಯ ಅಭಿವೃದ್ಧಿಯನ್ನು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಎಸ್. ಆಕಾಶ್ ಹಾಗೂ ಕಾರ್ಯನಿರ್ವಹಣಾ ಅಧಿಕಾರಿ ಶೇಖರ್ ಅವರ ಪ್ರಯತ್ನ ಹಾಗೂ ಬೆಂಬಲದಿAದ ನಡೆಸಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

- ಪ್ರಜ್ಞಾ ಜಿ.ಆರ್.