ಮಡಿಕೇರಿ, ಜು. ೧೭: ೫ ತಾಲೂಕುಗಳಿರುವ ಕೊಡಗು ಜಿಲ್ಲೆಗೆ ೩ ವಿಧಾನಸಭಾ ಕ್ಷೇತ್ರಗಳನ್ನು ನೀಡಬೇಕೆಂದು ವೀರನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಹರೀಶ್ ಆಚಾರ್ಯ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಜನಸಂಖ್ಯೆಯೂ ಹೆಚ್ಚಾಗಿದ್ದು, ಐದು ತಾಲೂಕುಗಳನ್ನಾಗಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ೩ ವಿಧಾನಸಭಾ ಕ್ಷೇತ್ರಗಳನ್ನು ನೀಡಬೇಕು. ಇದರಿಂದ ಹೆಚ್ಚು ಅನುದಾನ ತರಲು, ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ. ಜಿಲ್ಲೆಗೆ ೩ ಎಂಎಲ್‌ಎಗಳ ಜೊತೆಗೆ ಪ್ರತ್ಯೇಕ ಸಂಸದರನ್ನು ನೀಡಬೇಕು. ಹಾಗಾದಲ್ಲಿ ಸಚಿವ ಸ್ಥಾನ ಕೂಡ ಖಚಿತವಾಗುತ್ತದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ವೇದಿಕೆ ಸದಸ್ಯರಾದ ಚೌರೀರ ರಮೇಶ್, ರವಿ ಅಪ್ಪಯ್ಯ, ಪಳಂಗAಡ ಈಶ್ವರ್, ಐ. ಸೋಮನಾಥ್ ಉಪಸ್ಥಿತರಿದ್ದರು.