ಕೂಡಿಗೆ, ಜು. ೧೭: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕಳೆದರೆಡು ದಿನಗಳಿಂದ ಸರಕಾರದ ಅನ್ನ ಭಾಗ್ಯ ಯೋಜನೆಯ ಪಡಿತರ ವಸ್ತುಗಳನ್ನು ವಿತರಣೆ ಮಾಡುವ ನ್ಯಾಯ ಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಆಯಾ ವ್ಯಾಪ್ತಿಯ ಪಡಿತರ ವಸ್ತುಗಳನ್ನು ಪಡೆಯಲು ಗ್ರಾಹಕರು ಪರದಾಡುವ ಪ್ರಸಂಗ ಎದುರಾಗಿದೆ. ಸರಕಾರವು ಆಹಾರ ಸರಬರಾಜು ಇಲಾಖೆಯ ಮೂಲಕ ನೀಡುವ ಪಡಿತರ ಚೀಟಿಗೆ ಅನುಗುಣವಾಗಿ ಪಡಿತರ ವಸ್ತುಗಳನ್ನು ಪಡೆಯಲು ದಿನಗಟ್ಟಲೆ ಕಾಯ್ದು ಕುಳಿತರೂ ಸಹ ಸರ್ವರ್ ಸಮಸ್ಯೆಯಿಂದಾಗಿ ವಸ್ತುಗಳನ್ನು ಪಡೆಯಲು ತೊಂದರೆಯಾಗುತ್ತಿದೆ. ತಕ್ಷಣ ಈ ಸಮಸ್ಯೆಯನ್ನು ಸರಿಪಡಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.