ವೀರಾಜಪೇಟೆ, ಜು. ೧೭: ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ನಡೆದ ೨೬ನೇ ಅಖಿಲ ಭಾರತೀಯ ರಾಷ್ಟçಮಟ್ಟದ ಶಿಟಾರಿಯೋ ಕರಾಟೆ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಕೊಡಗಿನ ವಿವಿಧ ಶಾಲಾ ಕಾಲೇಜಿನ ಐವರು ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗೆಲವು ಸಾಧಿಸಿ ಕೊಡಗಿಗೆ ಕೀರ್ತಿ ತಂದಿದ್ದಾರೆ.
ಸೆಪ್ಟೆAಬರ್ ೨೭, ೨೮ ರಂದು ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯಲಿರುವ ಶಿಟಾರಿಯೋ ವಿಶ್ವ ಚಾಂಪಿಯನ್‌ಶಿಪ್ ಪಂದ್ಯಾಟಕ್ಕೆ ಈ ಐವರು ವಿದ್ಯಾರ್ಥಿಗಳು ಆಯ್ಕೆ ಯಾಗಿದ್ದಾರೆ. ಪೊನ್ನಂಪೇಟೆಯ ಸಿಐಟಿ ಇಂಜಿನಿಯರಿAಗ್ ಕಾಲೇಜಿನ ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಶನ್ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿ ಜ್ಞಾನೇಶ್ ಮೊದಲ ಸ್ಥಾನ ಗಳಿಸುವ ಮೂಲಕ ಚಿನ್ನದ ಪದಕ ಗಳಿಸಿದ್ದಾರೆ.
ವೀರಾಜಪೇಟೆಯ ಕಾವೇರಿ ಆಂಗ್ಲಮಾದ್ಯಮ ಶಾಲೆಯ ೯ನೇ ತರಗತಿ ವಿದ್ಯಾರ್ಥಿನಿ ಮನೆಯಪಂಡ ಶಿಪ್ರಾ ಕಾಳಪ್ಪ ಅವರಿಗೆ ಬೆಳ್ಳಿ ಪದಕ ಲಭಿಸಿದೆ. ಬೆಂಗಳೂರಿನಲ್ಲಿ ಇಂಜೀನಿಯರಿAಗ್ ಶಿಕ್ಷಣ ಪಡೆಯುತ್ತಿರುವ ಆದಿತ್ಯ ಅಯ್ಯಣ್ಣ, ತೃತೀಯ ಸ್ಥಾನ ಗಳಿಸಿ ಕಂಚಿನ ಪದಕ ಪಡೆದಿದ್ದಾರೆ.
ಸೆಂಟ್ ಆನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಗಾಯನ ಎಸ್.ಹೆಚ್ ಮೂಲಕ ಚಿನ್ನದ ಪದಕ ಗಳಿಸಿದ್ದಾರೆ.
ವೀರಾಜಪೇಟೆಯ ಕಾವೇರಿ ಆಂಗ್ಲಮಾದ್ಯಮ ಶಾಲೆಯ ೯ನೇ ತರಗತಿ ವಿದ್ಯಾರ್ಥಿನಿ ಮನೆಯಪಂಡ ಶಿಪ್ರಾ ಕಾಳಪ್ಪ ಅವರಿಗೆ ಬೆಳ್ಳಿ ಪದಕ ಲಭಿಸಿದೆ. ಬೆಂಗಳೂರಿನಲ್ಲಿ ಇಂಜೀನಿಯರಿAಗ್ ಶಿಕ್ಷಣ ಪಡೆಯುತ್ತಿರುವ ಆದಿತ್ಯ ಅಯ್ಯಣ್ಣ, ತೃತೀಯ ಸ್ಥಾನ ಗಳಿಸಿ ಕಂಚಿನ ಪದಕ ಪಡೆದಿದ್ದಾರೆ.
ಸೆಂಟ್ ಆನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಗಾಯನ ಎಸ್.ಹೆಚ್