ಸೋಮವಾರಪೇಟೆ, ಜು. ೧೭: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೌತಿ ಖಾತೆ ಆಂದೋಲನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ಕಂದಾಯ ಇಲಾಖೆಯ ವತಿಯಿಂದ ತಾ. ೧೮ರ ಮಂಗಳವಾರ (ಇಂದು) ಬೆಳಿಗ್ಗೆ ೧೧ ರಿಂದ ೧ರ ವರೆಗೆ ನಡೆಯಲಿದೆ ಎಂದು ಕಂದಾಯ ಪರಿವೀಕ್ಷಕ ಪ್ರಹ್ಲಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಂಚಾಯಿತಿ ವ್ಯಾಪ್ತಿಯ ಕಂದಾಯ ಗ್ರಾಮಗಳಾದ ಗರ್ವಾಲೆ, ಸೂರ್ಲಬ್ಬಿ, ಶಿರಂಗಳ್ಳಿ ಹಾಗೂ ಉಪ ಗ್ರಾಮಗಳಾದ ಕುಂಬಾರಗಡಿಗೆ, ಕಿರುದಾಲೆ, ಮಂಕ್ಯ ಗ್ರಾಮಗಳಿಗೆ ಸಂಬAಧಿದ ರೈತರು ಮತ್ತು ಸಾರ್ವಜನಿಕರು ತಮ್ಮ ಆಸ್ತಿಗಳ ಪೌತಿ ಖಾತೆ ಇಲ್ಲಿಯವರೆಗೆ ಆಗಿರದಿದ್ದಲ್ಲಿ ಪಹಣಿ, ಮರಣ ಹೊಂದಿದ್ದರೆ, ಮರಣ ದೃಢೀಕರಣ ಪತ್ರ ಹಾಗೂ ವಂಶವೃಕ್ಷದೊAದಿಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.