ಗೋಣಿಕೊಪ್ಪ ವರದಿ, ಜು. ೧೬: ಯುವ ಸಮೂಹ ಕೃಷಿಯತ್ತ ಒಲವು ತೋರಬೇಕು ಎಂದು ರಾಜ್ಯ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಬಿ.ಪಿ. ರವಿಶಂಕರ್ ಹೇಳಿದರು.
ಕಾವೇರಿ ಪದವಿ ಕಾಲೇಜು ರಾಷ್ಟಿçÃಯ ಸೇವಾ ಯೋಜನೆಯ ಶೈಕ್ಷಣಿಕ ವರ್ಷದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಉದ್ಯೋಗ ಅರಸಿ ಹೋಗುವ ಯುವಸಮೂಹ ಕೃಷಿಯಿಂದ ದೂರ ಉಳಿಯುವಂತಾಗಿದೆ. ಕೃಷಿಯಲ್ಲಿ ತೊಡಗಿಕೊಳ್ಳುವ ಮೂಲಕ ತಮ್ಮ ಬದುಕಿಗೆ ಬೇಕಾದ ಆಹಾರವನ್ನು ಉತ್ಪಾದಿಸಲು ಮನಸ್ಸು ಮಾಡಬೇಕಿದೆ. ಆಹಾರ ಕೊರತೆ ಎದುರಾಗದಂತೆ ನಾವು ಎಚ್ಚರವಹಿಸಬೇಕಿದೆ ಎಂದು ಸಲಹೆ ನೀಡಿದರು.
ಅತ್ಯುತ್ತಮ ಸ್ವಯಂ ಸೇವಕರಾಗಿ ಎಸ್.ಕೆ. ದರ್ಶನ್, ಸ್ವಯಂ ಸೇವಕಿಯಾಗಿ ಜಿ.ಎಂ. ಮೋಕ್ಷಾ, ಅತ್ಯುತ್ತಮ ನಾಯಕನಾಗಿ ಕಲನ್ ಕಾರ್ಯಪ್ಪ, ನಾಯಕಿಯಾಗಿ ಪ್ರಮೀಳ, ಶಿಸ್ತುಬದ್ಧ ಸೇವಕರಾಗಿ ಅನ್ವಿತ ಬಹುಮಾನ ಪಡೆದುಕೊಂಡರು.
ಎನ್‌ಎಸ್‌ಎಸ್ ಅಧಿಕಾರಿ ಮಂದೆಯAಡ ವನೀತ್‌ಕುಮಾರ್ ಶೈಕ್ಷಣಿಕ ಕಾರ್ಯಕ್ರಮಗಳ ವರದಿ ನೀಡಿದರು. ಸ್ವಯಂ ಸೇವಕರು ಎನ್‌ಎಸ್‌ಎಸ್ ವೇದಿಕೆಯಿಂದ ಆಗುತ್ತಿರುವ ಪ್ರಯೋಜನಗಳ ಬಗ್ಗೆ ಅಭಿಪ್ರಾಯ ಹಂಚಿಕೊAಡರು.
ಪೊನ್ನAಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಪ್ರಾಂಶುಪಾಲ ಡಾ. ಮಾಳೇಟಿರ ಬಿ. ಕಾವೇರಪ್ಪ, ಎನ್‌ಎಸ್‌ಎಸ್ ಅಧಿಕಾರಿ ಎನ್.ಪಿ. ರೀತಾ ಇದ್ದರು.