ಮಡಿಕೇರಿ, ಜು. ೧೬: ಮಡಿಕೇರಿಯ ಸಂತ ಮೈಕಲರ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸುಮಾರು ಮೂವತ್ತಕ್ಕೂ ಹೆಚ್ಚಿನ ವಿಜ್ಞಾನ ಕಾರ್ಯಗತ ಮಾದರಿಗಳನ್ನು ಪ್ರದರ್ಶಿಸಿದರು. ಕಾಲೇಜಿನ ಪ್ರಿನ್ಸಿಪಾಲರಾದ ಕೆ.ಎಸ್. ಸುಮಂತ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ.ಎ. ಜಾನ್ಸನ್, ಕೊಡಗು ವಿದ್ಯಾಲಯದ ಪ್ರಿನ್ಸಿಪಾಲೆ ಸುಮಿತ್ರ, ಕೊಡಗು ವಿದ್ಯಾಲಯದ ಆಡಳಿತ ವ್ಯವಸ್ಥಾಪಕ ರವಿ ಅವರು ಉಪಸ್ಥಿತರಿದ್ದರು.

ತೀರ್ಪುಗಾರರಾಗಿ ಭೌತಶಾಸ್ತçದ ಉಪನ್ಯಾಸಕಿಯರಾದ ಮಡಿಕೇರಿ ಸರಕಾರಿ ಪದವಿಪೂರ್ವ ಕಾಲೇಜಿನ ಪಲ್ಲವಿ, ಸಂತ ಜೋಸೆಫರ ಕಾಲೇಜಿನ ಯಂ.ಸಿ. ಚೈತ್ರ ಮತ್ತು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಬಿ.ವಿ. ವೀಕ್ಷಿತಾ ಕಾರ್ಯನಿರ್ವಹಿಸಿದರು.

ವಿದ್ಯಾರ್ಥಿ ಮಾರ್ಗದರ್ಶಕಿಯರಾದ ಉಪನ್ಯಾಸಕಿ ಪಿ.ಡಿ. ಗಾನವಿ, ಶ್ವೇತ ರುಮಾಲೆ, ಸಿ.ಸಿ. ಶ್ವೇತಾ, ಮನಿಷಾ ಮೊರಾಸ್ ಅವರ ಸಹಕಾರದೊಂದಿಗೆ ವಿದ್ಯಾರ್ಥಿಗಳು ‘ತ್ರಿಡಿ ಪ್ರಿಂಟರ್ ಸ್ಮಾರ್ಟ್ ಬಿನ್’, ಡಿ.ಸಿ.-ಎ.ಸಿ. ಕನ್‌ವರ್ಟರ್, ಟೆಸ್ಲ ಕಾಯಿಲ್, ರೆಡಾರ್, ವಿವಿಧ ಸೆನ್ಸರ್‌ಗಳ ಹೈಡ್ರೋ ಇಲೆಕ್ಟಿçಸಿಟಿ, ಭೂಕಂಪನ ಡಿಟೆಕ್ಟರ್, ಮೆಟಲ್ ಡಿಟೆಕ್ಟರ್, ಆ್ಯಂಟಿ ಸ್ಲೀಪ್ ಅಲಾರ್ಮ್ಗಳು, ವೀಟ್‌ಸ್ಟನ್ಸ್ ಬ್ರಿಡ್ಜ್, ಕ್ಲಾಪ್ ಸ್ವಿಚ್, ಲೇಸರ್ ಸೆಕ್ಯೂರಿಟಿ ಅಲಾರ್ಮ್, ವೈ-ಫೈ, ಕೃತಕ ಮೋಡಗಳ ಸೃಷ್ಟಿ, ಫ್ಯಾರಡೆ ಕೇಜ್, ಎಗ್ ಇನ್‌ಕ್ಯೂಬೇಟರ್, ಹೈಡ್ರಾಲಿಕ್ ಬ್ರಿಡ್ಜ್, ಹೈಡ್ರಾಲಿಕ್ ಕಾರ್ ಪಾರ್ಕಿಂಗ್, ಅಬ್ಸ್ಟೆಕಲ್, ಡಿಟೆಕ್ಟಿಂಗ್ ಕಾರ್, ಲೇಸರ್ ಸಂಬAಧಿತ ಮಾದರಿಗಳನ್ನು ಪ್ರದರ್ಶಿಸಿದರು.

ತಾ. ೧೦ ರಂದು ಜಿಲ್ಲೆಯ ವಿವಿಧ ಕಾಲೇಜಿನ ಪ್ರಿನ್ಸಿಪಾಲರುಗಳು ಸಂತ ಮೈಕಲರ ಕಾಲೇಜಿಗೆ ಭೇಟಿ ನೀಡಿ ವಿಜ್ಞಾನ ವರ್ಕಿಂಗ್ ಮಾಡೆಲ್‌ಗಳ ಪ್ರದರ್ಶನವನ್ನು ವೀಕ್ಷಿಸಿದರು. ಕಾಲೇಜಿನ ಭೌತಶಾಸ್ತç ಉಪನ್ಯಾಸಕಿ ಪಿ.ಡಿ. ಗಾನವಿ ಅವರು ಸ್ವಾಗತಿಸಿ, ವಂದಿಸಿದರು.