ಕೂಡಿಗೆ, ಜು. ೧೬: ಹಾರಂಗಿ ಅಣೆಕಟ್ಟೆಯ ಸಮೀಪದಿಂದ ಮುಖ್ಯ ನಾಲೆಯ ೩ ಕಿಲೋಮೀಟರ್ ದೂರದವರೆಗಿನ ಮುಖ್ಯ ನಾಲೆ ಏರಿಯಾ ಮೇಲೆ ಬೆಳೆದುನಿಂತಿರುವ ಮರಗಳ ತೆರವಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿತು.
ಕಳೆದ ವಾರ ಶಾಸಕ ಮಂಥರ್ ಗೌಡ ಅಧ್ಯಕ್ಷತೆ ಯಲ್ಲಿ ಹಾರಂಗಿಯ ಅತಿಥಿ ಗೃಹದಲ್ಲಿ ನಡೆದ ಅರಣ್ಯ ಇಲಾಖೆ ಮತ್ತು ಹಾರಂಗಿ ನೀರಾವರಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಶಾಸಕರು ಅಭಿವೃದ್ಧಿ ಕಾಮಗಾರಿಗೆ ಬೃಹತ್ ಗಾತ್ರದ ಮರಗಳಿಂದ ಸಮಸ್ಯೆಯಾಗಿದೆ. ತೆರವುಗೊಳಿಸುವಂತೆ ಸಂಬAಧಿಸಿದ ಇಲಾಖೆ ಯವರಿಗೆ ಸೂಚನೆ ನೀಡಿದ್ದರು. ಅದರನ್ವಯ ಅಧಿಕಾರಿಗಳ ತಂಡದವರು ಜಂಟಿಯಾಗಿ ನಾಲೆ ಮೇಲಿನ ಮರಗಳ ತೆರವಿಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭ ಸೋಮವಾರಪೇಟೆ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಗೋಪಾಲ್, ವಲಯ ಅರಣ್ಯ ಅಧಿಕಾರಿ ಚೇತನ್, ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಸತೀಶ್ ಕುಮಾರ್, ಹಾರಂಗಿ ನೀರಾವರಿ ಇಲಾಖೆಯ ಇಂಜಿನಿಯರ್ ಸೌಮ್ಯ, ಅರುಣ್, ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.