ಶ್ರೀಮಂಗಲ, ಜು. ೧೬: ಪೊನ್ನಂಪೇಟೆ ತಾಲೂಕಿನ ೩೮೧೯೦ನೇ ನಾಲ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎರಡನೇ ಅವಧಿಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಲ್ಲುಮಾಡ ಸಿ. ಪ್ರಕಾಶ್ ಹಾಗೂ ಉಪಾಧ್ಯಕ್ಷರಾಗಿ ಎಸ್.ಬಿ. ಪರಶಿವ, ನಿರ್ದೇಶಕರುಗಳಾಗಿ ಅಲ್ಲುಮಾಡ ಬಿ. ಮುತ್ತಪ್ಪ, ಕಳ್ಳಿಚಂಡ ಕಾರ್ಯಪ್ಪ (ವಿಜು), ಕಚ್ಚಪನೆರ ಕೆ. ದೇವಯ್ಯ (ದೀಪು), ಮುಕ್ಕಾಟಿರ ವಿಜಯ್, ಎನ್.ಎಂ. ರಾಜೇಶ್, ವಿಜಯ್ ಹೆಚ್.ಆರ್., ತೀತಿರ ಭವಾನಿ, ಮುಕ್ಕಾಟೀರ ರಶ್ಮಿ ಪೂವಮ್ಮ, ಮುದ್ದಿಯಡ ಶೋಭಾ ಹಾಗೂ ಬೆಳ್ಳಿ ಪಿ.ಕೆ. ರವರು ಚುನಾಯಿತರಾಗಿದ್ದಾರೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.