ಶನಿವಾರಸಂತೆ, ಜು. ೧೬: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಇಂದು ನೆನ್ನೆಯದಲ್ಲ; ಸುದೀರ್ಘ ಇತಿಹಾಸ ಹೊಂದಿದ್ದು ನಿರಂತರ ವಾಗಿ ಸಮಾಜಕ್ಕೆ ಅಗತ್ಯವಾದ ಕೊಡುಗೆಯನ್ನು ನೀಡುತ್ತಾ ಬಂದಿವೆ ಎಂದು ತಪೋವನ ಕ್ಷೇತ್ರ ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ೮ ದಿನಗಳ ಮದ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಸಂಸ್ಥೆಗಳು ಮೂರು ರೀತಿಯ ಸೇವೆಯನ್ನು ಸಲ್ಲಿಸುತ್ತಿವೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನರ ಬೇಕು ಬೇಡಿಕೆ ಗಳನ್ನು, ಸಮಸ್ಯೆಯನ್ನು ತಾನಾಗಿ ಅರಿತು ಪರಿಹಾರ ಕಲ್ಪಿಸಿ ಕೊಡು ವುದು ಒಂದನೇ ಸೇವೆಯಾಗಿದೆ. ಬೇಡಿಕೆಗೆ, ಸಹಾಯಕ್ಕೆ ಸ್ಪಂದಿಸುವುದು, ಒದಗಿಸುವುದು ಎರಡನೇ ಸೇವೆಯಾದರೇ ಮೂರನೇಯದು ಯೋಜನೆ ಹೆಸರು ಹೇಳಿಕೊಂಡು ಪಡೆಯುವ ಸೇವೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜನ ಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷ ಅಭಿಮನ್ಯು ಕುಮಾರ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಯೋಜನೆಯ ಮೂಲಕ ಸೇವೆ ಸಲ್ಲಿಸದ ಕ್ಷೇತ್ರವಿಲ್ಲ. ಮದ್ಯ ವ್ಯಸನಿ ಗಳಿಂದ ಎಷ್ಟೋ ಕುಟುಂಬಗಳು ನಾಶವಾಗಿವೆ. ಈ ಸಮಸ್ಯೆಗೆ ಸ್ಪಂದಿಸಿದ ಹೆಗಡೆಯವರು ಚಿಂತನೆ ಮಾಡಿ, ಗ್ರಾಮಾಭಿವೃದ್ಧಿ ಯೋಜನೆ ಯಡಿ ಮದ್ಯವರ್ಜನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಇಂದು ಎಷ್ಟೋ ಕುಟುಂಬಗಳು ಸುಖಿ ಕುಟುಂಬಗಳಾಗಿ ಉಳಿದಿವೆ. ಮದ್ಯ ವ್ಯಸನವನ್ನು ಔಷಧಿಯಿಂದ ಬಿಡಿಸಲು ಸಾಧ್ಯವಿಲ್ಲ. ಮಾನಸಿಕ ಪರಿವರ್ತನೆಯಿಂದ ಮಾತ್ರ ಕುಡಿತದ ಚಟವನ್ನು ಬಿಡಿಸಲು ಸಾಧ್ಯ ಎಂದರು. ಯೋಜನೆ ೧೬೮೭ ಮದ್ಯವರ್ಜನ ಶಿಬಿರಗಳನ್ನು ನಡೆಸಿದ್ದು ಲಕ್ಷಾಂತರ ಮಂದಿ ನವ ಜೀವನವನ್ನು ಕಟ್ಟಿ ಕೊಂಡಿದ್ದಾರೆ. ಇಂತಹ ಶಿಬಿರಗಳು ಮದ್ಯವ್ಯಸನಿ ಚಟ ತೊರೆದು ಹೊಸ ಜೀವನ ಕಟ್ಟಿಕೊಳ್ಳಲು ಸಹಕಾರಿ ಯಾಗಿವೆ ಎಂದರು. ಉಡುಪಿಯ ಜನಜಾಗೃತಿ ವೇದಿಕೆ ಯೋಜ ನಾಧಿಕಾರಿ ಗಣೇಶ್ ಆಚಾರ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರ ಮದ್ಯವ್ಯಸನಿಗಳ ಮನ ಪರಿ ವರ್ತನೆಯ ವಿಶೇಷ ಕಾರ್ಯ ಕ್ರಮವಾಗಿದ್ದು ಜನಪ್ರಿಯವಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಹೆಚ್. ರೋಹಿತ್, ಮೇಲ್ವಿಚಾರಕ ಕೆ.ಪಿ. ನಾಗರಾಜ್, ಮದ್ಯವರ್ಜನ ಶಿಬಿರ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ರಕ್ಷಿತ್ ರವೀಂದ್ರಗೌಡ, ಗೌರವ ಅಧ್ಯಕ್ಷ ಎಸ್.ಎಸ್. ದಿವಾಕರ್, ಶನಿವಾರಸಂತೆ-ದುAಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ಫರ್ಜಾನ ಶಾಹಿದ್, ಪೂರ್ಣಿಮಾ ಕಿರಣ್, ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷ ಚಂದ್ರಮೋಹನ್, ಸದಸ್ಯ ರಾದ ಭಗವಾನ್, ಸುರೇಶ್, ಪ್ರಮುಖ ರಾದ ಭುವನೇಶ್ವರಿ, ಎಸ್.ಎನ್. ರಘು, ಸಿ.ಜೆ. ಗಿರೀಶ್, ಬಿ.ಬಿ. ನಾಗರಾಜ್, ಇಂದ್ರೋಜಿ ರಾವ್, ಫ್ರಾನ್ಸಿಸ್ ಡಿಸೋಜ, ಸೋಮೇಶ್, ಶೋಭಾವತಿ, ಶಾಹಿನ್, ಎಸ್.ಪಿ. ಭಾಗ್ಯಾ, ಸರೋಜಾ, ಇತರರು ಉಪಸ್ಥಿತರಿದ್ದರು.