ಕರಿಕೆ, ಜು. ೧೬: ಇಲ್ಲಿನ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದಲ್ಲಿ ಹಸಿರೀಕರಣ ಮಾಡುವ ಉದ್ದೇಶದಿಂದ ಗ್ರಾಮಸ್ಥರಿಗೆ ವಿವಿಧ ಬಗೆಯ ಸಸ್ಯಗಳನ್ನು ವಿತರಿಸಲಾಯಿತು.
ಸೀಬೆ, ಲಿಂಬೆ, ಗಸೆಗಸೆ, ನೇರಳೆ, ನೆಲ್ಲಿ, ಕಾಡು ಬಾದಾಮಿ, ಸೇರಿದಂತೆ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ವಿತರಿಸ ಲಾಯಿತು.
ಗಿಡ ವಿತರಣೆ ಮಾಡಿ ಮಾತನಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ.ಪಿ. ಗಣಪತಿ ಗ್ರಾಮದ ಪ್ರತಿ ಮನೆ ಮುಂದೆ ಒಂದೊAದು ಹಸಿರು ಗಿಡ ನೆಟ್ಟು ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮಸ್ಥರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಡಿಕೇರಿ ಅರಣ್ಯ ವಿಭಾಗದ ವಾಟೆಕಾಡು ನರ್ಸರಿಯಿಂದ ಈ ಗಿಡಗಳನ್ನು ಖರೀದಿಸಿ ಉಚಿತವಾಗಿ ಹಂಚಲಾಗುತ್ತಿದೆ ಎಂದರು. ಈ ಸಂದರ್ಭ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು