ಮಡಿಕೇರಿ, ಜು. ೧೬: ಮಡಿಕೇರಿ ನಗರದಲ್ಲಿ ಗಣಪತಿ ಬೀದಿಗೆ ಜಾಗದಾನ ಮಾಡಿರುವ ಕೊಂಗAಡ ಎಸ್. ಗಣಪತಿ ಅವರ ಹೆಸರನ್ನು ಇಟ್ಟಿರುವ ಸ್ಥಳದ ನಾಮಫಲಕವನ್ನು ಇದೀಗ ನಗರಸಭೆ ವತಿಯಿಂದ ಮರು ಅಳವಡಿಕೆ ಮಾಡಲಾಗಿದೆ. ಗಣಪತಿ ಬೀದಿ ರಸ್ತೆ ವಿಸ್ತರಣೆ ಸಂದರ್ಭ ಈ ನಾಮಫಲಕವನ್ನು ತೆರವುಗೊಳಿಸಲಾಗಿತ್ತು. ಆದರೆ ನಂತರದಲ್ಲಿ ಹಲವಷ್ಟು ಸಮಯ ಇದನ್ನು ಮತ್ತೆ ಅಳವಡಿಸಲಾಗಿರಲಿಲ್ಲ.

ಈ ಬಗ್ಗೆ ಸ್ಥಳೀಯ ಮುತ್ತಪ್ಪ ಕೇರಿ ಕೊಡವ ಸಂಘ ಸೇರಿದಂತೆ ವ್ಯಾಪ್ತಿಯ ನಗರಸಭಾ ಸದಸ್ಯರಾದ ಅಮೀನ್ ಮೊಹಿಸೀನ್ ಅವರುಗಳು ಕೂಡ ನಗರಸಭೆಯ ಗಮನಕ್ಕೆ ತಂದು ಈ ಕುರಿತು ಮನವಿ ಮಾಡಿದ್ದರು. ಇದೀಗ ಈ ನಾಮಫಲಕವನ್ನು ನಿನ್ನೆ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರ ಉಪಸ್ಥಿತಿಯಲ್ಲಿ ನಿರ್ದಿಷ್ಟ ಜಾಗವನ್ನು ಅಂತಿಮಪಡಿಸಿ ಮರು ಅಳವಡಿಕೆ ಮಾಡಲಾಯಿತು.

ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್.ಸಿ. ಸತೀಶ್, ನಗರಸಭಾ ಸದಸ್ಯರಾದ ಅಮೀನ್ ಮೊಹಿಸೀನ್, ಬಷೀರ್, ಅಭಿಯಂತರ ಶಮಂತ್, ಕೊಂಗಡ ಕುಟುಂಬಸ್ಥರಾದ ಕೆ.ಎಸ್. ದೇವಯ್ಯ, ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.