ಮಡಿಕೇರಿ, ಜು. ೧೫: ಅಪಾರ ಪ್ರಮಾಣದ ಕೃಷಿ ಫಸಲು ನಾಶ ಮಾಡುವುದರ ಮೂಲಕ ಕಾರ್ಮಿಕರು, ಬೆಳೆಗಾರರಲ್ಲಿ ಭಯ ಸೃಷ್ಟಿ ಮಾಡಿ ಹಾಡಹಗಲಿನಲ್ಲೂ ರಾಜಾರೋಷವಾಗಿ ಕಾಣಿಸಿಕೊಂಡು ಹಲವರ ಮೇಲೆ ದಾಳಿ ಮಾಡುತ್ತಿದ್ದ ಕಾಡಾನೆಯನ್ನು ಸೆರೆಹಿಡಿದು ಕಾಡಿಗೆ ಬಿಟ್ಟರೂ ಮರಳಿ ಆನೆ ವಾಪಸ್ ಬಂದಿರುವುದರಿAದ ಕಾರ್ಮಿಕರು, ಬೆಳೆಗಾರರಲ್ಲಿ ಮತ್ತೆ ಆತಂಕ ಮನೆಮಾಡಿದೆ.
ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಸಮೀಪದ ಒಂಟಿಯAಗಡಿ ಬಳಿಯ ಕಾಫಿ ತೋಟವೊಂದರಲ್ಲಿ ಬೀಡುಬಿಟ್ಟಿದ್ದ ಆನೆಯನ್ನು ಹರಸಾಹಸ ಪಟ್ಟು ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕು ಅಂತರಸAತೆ ವ್ಯಾಪ್ತಿಯ ಅರಣ್ಯಕ್ಕೆ ಬಿಡಲಾಗಿತ್ತು. ಆದರೆ, ಕಾಡು ತೊರೆದು ನಾಡಿನತ್ತ ಆನೆ ಲಗ್ಗೆ ಇಟ್ಟಿದೆ. ‘ರೇಡಿಯೋ ಕಾಲರ್’ನಲ್ಲಿ ಟ್ರಾö್ಯಕಿಂಗ್ ಕೂಡ ಪತ್ತೆಯಾಗಿದೆ.
೨೦ ದಿನಗಳ ನಂತರ ಮತ್ತೆ ಕೊಡಗು ಜಿಲ್ಲೆಗೆ ಪ್ರವೇಶಿಸಿರುವ ಕಾಡಾನೆ ಚೆನ್ನಂಗಿ, ಪಾಲಿಬೆಟ್ಟ, ಮಾಲ್ದಾರೆ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಸುತ್ತಾಡುತ್ತಿರುವುದು ರೇಡಿಯೋ ಕಾಲರ್ ಮ್ಯಾಪ್‌ನಲ್ಲಿ ಪತ್ತೆಯಾಗಿದೆ. ಸ್ಥಳೀಯ ಕಾರ್ಮಿಕರು ಆನೆ
(ಮೊದಲ ಪುಟದಿಂದ) ಬಂದಿರುವ ಬಗ್ಗೆಯೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆನೆಯ ಹುಡುಕಾಟದಲ್ಲಿ ನಿರತರಾಗಿದ್ದು ಚಲನವಲನದ ಬಗ್ಗೆ ನಿಗಾವಹಿಸಿದ್ದಾರೆ.
ಹಲವರ ಮೇಲೆ ದಾಳಿ ಮಾಡಿ ಕೃಷಿ ಫಸಲು ನಾಶ ಮಾಡುತ್ತಿದ್ದ ಕಾಡಾನೆ ಸೆರೆ ಹಿಡಿಯಬೇಕೆಂದು ಕಾರ್ಮಿಕರು, ಬೆಳೆಗಾರರು ಒತ್ತಾಯಿಸಿದ ಹಿನ್ನೆಲೆ ಜೂನ್ ೨೫ ರಂದು ಸರ್ಕಾರದ ಅನುಮತಿ ಮೇರೆಗೆ ಮತ್ತಿಗೋಡು ಶಿಬಿರದ ೫ ಸಾಕಾನೆಗಳೊಂದಿಗೆ ೪೦ಕ್ಕೂ ಹೆಚ್ಚು ಸಿಬ್ಬಂದಿಗಳು ಎರಡು ದಿನಗಳ ಕಾಲ ಹರಸಾಹಸ ಪಟ್ಟು ಕಾರ್ಯಾಚರಣೆ ನಡೆಸಿ ಅಮ್ಮತ್ತಿ ಒಂಟಿಯAಗಡಿ ಬಳಿಯ ಕಾಫಿ ತೋಟವೊಂದರಲ್ಲಿ ಕಾಡಾನೆಯ ಮೇಲೆ ಅರವಳಿಕೆ ಪ್ರಯೋಗಿಸಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
ರೇಡಿಯೋ ಕಾಲರ್ ಸ್ಪೆಷಲಿಸ್ಟ್ ತಮ್ಮಯ್ಯ ಕಾಡಾನೆ ಕುತ್ತಿಗೆಗೆ ರೇಡಿಯೋ ಕಾಲರ್ ಅಳವಡಿಸಿ ದ್ರೋಣ ಎಂದು ನಾಮಕರಣ ಮಾಡಲಾಗಿತ್ತು.
ಆರೈಕೆ ನಂತರ ಕ್ರೇನ್ ಮೂಲಕ ಲಾರಿಗೆ ಹತ್ತಿಸಿ ಬಂಡೀಪುರಕ್ಕೆ ಕಳುಹಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರು.
ಸೆರೆ ಹಿಡಿಯಲಾಗಿದ್ದ ಆನೆಯನ್ನು ಬಂಡೀಪುರಕ್ಕೆ ಕಳುಹಿಸದೆ ಎಚ್.ಡಿ. ಕೋಟೆ ಸಮೀಪದ ಅಂತರಸAತೆ ಬಳಿ ಇರುವ ಅರಣ್ಯಕ್ಕೆ ಬಿಡಲಾಗಿತ್ತು ಎನ್ನಲಾಗಿದೆ.
೧೦೦ ಕಿಲೋಮೀಟರ್ ದೂರದಿಂದ ಬಂದ ಕಾಡಾನೆ
ಆನೆಯ ಚಲನವಲನ ಪರಿಶೀಲನೆ ಮಾಡಲು ಅರಣ್ಯ ಇಲಾಖೆಯ ರೇಡಿಯೋ ಕಾಲರ್ ನಲ್ಲಿ ಪರಿಶೀಲಿಸಿದ ಸಂದರ್ಭ ಐದು ದಿನಗಳ ಹಿಂದೆ ಪಿರಿಯಾಪಟ್ಟಣ ಸಮೀಪದ ಲಿಂಗಾಪುರ ಬಳಿಯ ಅರಣ್ಯದಲ್ಲಿ ಕಾಣಿಸಿಕೊಂಡಿತ್ತು. ನಂತರದ ದಿನಗಳಲ್ಲಿ ಚೆನ್ನಂಗಿ ಅರಣ್ಯ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಕಾಡಾನೆ ತನ್ನ ವಾಸ ಸ್ಥಳವಾದ ಚೆನ್ನಂಗಿ, ಮೇಕೂರು, ಮಾಲ್ದಾರೆ, ಬಾಡಗ ಬಾಣಂಗಾಲ, ಮೈಲಾಪುರ ಭಾಗದಲ್ಲಿ ಸುತ್ತಾಡುತ್ತಿರುವುದು ಕಂಡುಬAದಿದೆ.
ಎಸ್.ಎA. ಮುಬಾರಕ್