ಮಡಿಕೇರಿ, ಜು. ೧೫ : ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಕಡ್ಲೇರ ತುಳಸಿ ಮೋಹನ್ ಅವರನ್ನು ಆಯ್ಕೆಗೊಳಿಸಲಾಗಿದೆ. ಇದೇ ಪ್ರಥಮ ಬಾರಿಗೆ ಮಹಿಳಾ ಅಧ್ಯಕ್ಷರು ಆಯ್ಕೆಯಾಗಿದ್ದು, ಗೌರವ ಕಾರ್ಯದರ್ಶಿಗಳಾಗಿ ಪುದಿಯನೆರವನ ರಿಶೀತ್ ಮಾದಯ್ಯ ಮತ್ತು ಬಾಳೆಯಡ ದಿವ್ಯ ಮಂದಪ್ಪ ಹಾಗೂ ಕೋಶಾಧಿಕಾರಿಯಾಗಿ ಸಿದ್ಧರಾಜು ಬೆಳ್ಳಯ್ಯ, ಸಂಘಟನಾ ಕಾರ್ಯದರ್ಶಿಯಾಗಿ ಚೊಕ್ಕಾಡಿ ಪ್ರೇಮಾ ರಾಘವಯ್ಯ ಮತ್ತು ತಳೂರು ದಿನೇಶ್ ಕರುಂಬಯ್ಯ, ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಎಚ್.ಟಿ. ಅನಿಲ್, ಮಹಿಳಾ ಪ್ರತಿನಿಧಿಗಳಾಗಿ ಶೋಭಾ ಸುಬ್ಬಯ್ಯ, ಗೌರಮ್ಮ ಮಾದಮಯ್ಯ, ಪರಿಶಿಷ್ಟ ಜಾತಿ ಪ್ರತಿನಿಧಿಗಳಾಗಿ ಬಿ.ಎಲ್. ಸಂದೇಶ್ ಮತ್ತು ಹೆಚ್.ಪಿ. ಜಯಮ್ಮ, ಪರಿಶಿಷ್ಟ ಪಂಗಡ ಪ್ರತಿನಿಧಿಯಾಗಿ ಬಿ.ಎಸ್. ರಂಗಪ್ಪ, ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ ಎಂ.ಎA. ಅಬ್ದುಲ್ಲಾ, ನಿಕಟಪೂರ್ವ ಅಧ್ಯಕ್ಷರಾಗಿ ಅಂಬೇಕಲ್ ನವೀನ್ ಅವರುಗಳನ್ನು ನೇಮಕ ಮಾಡಲಾಗಿದೆ.

ಪದನಿಮಿತ್ತ ಪ್ರತಿನಿಧಿಗಳಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಡಿಕೇರಿ. ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಪ್ರಾಂಶುಪಾಲರು, ಶ್ರೀ ರಾಜರಾಜೇಶ್ವರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜ ನಾಧಿಕಾರಿ ಪುರುಷೋತ್ತಮ್, ಸಂಜೀವಿನಿ ಒಕ್ಕೂಟದ ತಾಲೂಕು ಅಧ್ಯಕ್ಷೆ ರೇಖಾ, ಅಂಗನವಾಡಿ ಕಾರ್ಯಕರ್ತೆಯ ಸಂಸ್ಥೆಯ ತಾಲೂಕು ಅಧ್ಯಕ್ಷೆ ಸಿ.ಯು. ಪವಿತ್ರ ಕಾರ್ಯನಿರ್ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಪಿ.ಪಿ. ಸೋನಾ ಪ್ರೀತು, ಪೂರ್ಣಿಮಾ ಜೋಶಿ, ಸುನಿಲ್ ಲೋಬೊ, ಮೆಹಬೂಬ್ ಖಾನ್, ಕೆ.ಯು. ರಂಜಿತ್, ಗೀತಾ ಗಿರೀಶ್, ಎಂ.ಎA. ಅಹಮದ್ ಆಲಿ, ಯು.ಸಿ. ದಮಯಂತಿ, ಹರೀಶ್ ಸರಳಾಯ, ವಿ. ಜಯರಾಜ್, ಜೆ. ಮಹೇಶ್ವರ್, ವಿನೋದ್ ಮೂಡಗೆದ್ದೆ ಮತ್ತು ಚಿತ್ರ ಆರ್ಯನ್ ಅವರನ್ನು ನೇಮಿಸಿ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಆದೇಶಿಸಿದ್ದಾರೆ ಎಂದು ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.