ಮಡಿಕೇರಿ, ಜು. ೧೫: ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಶ್ರೀ ಮಾರಮ್ಮ ದೇವರ ವಾರ್ಷಿಕ ‘ಮಾರಿಗುಡಿ’ ಹಬ್ಬ ತಾ.೧೬ ರಿಂದ (ಇಂದಿನಿAದ) ಆರಂಭಗೊಳ್ಳಲಿದೆ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಊರು ತಕ್ಕರಾದ ಚಮ್ಮಟೀರ ಸುಗುಣ ಮುತ್ತಣ್ಣ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಇತಿಹಾಸ ಪ್ರಸಿದ್ಧ ಹಳ್ಳಿಗಟ್ಟು ‘ಮಾರಿಗುಡಿ’ ಹಬ್ಬವು ಪ್ರತಿ ವರ್ಷ ಕಕ್ಕಡ ಮಾಸದ ಒಂದು ದಿನದ ಮುಂಚಿತವಾಗಿ ಆರಂಭಗೊAಡು, ಎರಡನೇ ಹಬ್ಬ ಒಂದು ವಾರದ ನಂತರ ತಾ. ೨೨ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.

ಕೊಡವರೇ ಇಲ್ಲಿ ಪೂಜಾರಿ ಗಳಾಗಿದ್ದು, ಇಲ್ಲಿನ ಮಚ್ಚಿಯಂಡ ಕುಟುಂಬದವರು ವಿವಿಧ ಕಟ್ಟುಪಾಡು ಗಳೊಂದಿಗೆ ಪೂಜಾವಿಧಿ ವಿಧಾನಗಳನ್ನು ನೆರವೇರಿಸುತ್ತಾರೆ. ತಾ.೧೬ ರಂದು ಬೆಳಿಗ್ಗೆಯಿಂದ ಸಂಜೆಯವರೆಗೂ ಹಬ್ಬ ನಡೆಯಲಿದೆ ಎಂದು ತಿಳಿಸಿದ್ದಾರೆ.