ಬೆಂಗಳೂರು, ಜು. ೧೫ : ಕೊಡವ ಬುಡಕಟ್ಟು ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕುಲಶಾಸ್ತಿçÃಯ ಅಧ್ಯಯನ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ನೇತೃತ್ವದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ನಿಯೋಗವು ಇಂದು ಅವರನ್ನು ಭೇಟಿ ಮಾಡಿದ ಸಂದರ್ಭ ದಲ್ಲಿ ಅವರು ಮಾತನಾಡಿದರು.

‘ಕೊಡಗರು’ ಎಂದು ನಮೂದಾಗಿರುವ ಕೊಡವ ಸಮುದಾಯದ ಹೆಸರನ್ನು `ಕೊಡವ' ಎಂದು

(ಮೊದಲ ಪುಟದಿಂದ) ತಿದ್ದುಪಡಿ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಲು ಕೂಡ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ನೇತೃತ್ವದ ನಿಯೋಗದಲ್ಲಿ ಲೆ.ಕ. ಬಿ.ಎಂ. ಪಾರ್ವತಿ, ಪಳಂಗAಡ ಸರೋಜ, ಕೇಚೆಟ್ಟಿರ ಪಾರ್ವತಿ, ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಪುಲ್ಲೇರ ಕಾಳಪ್ಪ, ಅಜ್ಜಿಕುಟ್ಟಿರ ಲೋಕೇಶ್, ಬೊಟ್ಟಂಗಡ ಗಿರೀಶ್, ಪಟ್ಟಮಾಡ ಕುಶ, ಅಲ್ಮಂಡ ಜೈ, ಮಂದಪAಡ ಮನೋಜ್, ಕೇಕಡ ಕುಟ್ಟಪ್ಪ, ಕಾಂಡೇರ ಸುರೇಶ್, ಜಮ್ಮಡ ಮೋಹನ್, ಚಂಬAಡ ಜನತ್, ಬಾಚಮಂಡ ರಾಜ ಪೂವಣ್ಣ, ಬೇಪಡಿಯಂಡ ದಿನು, ಅರೆಯಡ ಗಿರೀಶ್, ಕಾಟುಮಣಿಯಂಡ ಉಮೇಶ್, ಕಿರಿಯಮಾಡ ಶರೀನ್, ಕಿರಿಯಮಾಡ ಶಾನ್, ಪಟ್ಟಮಾಡ ಅರುಣ್, ಪಟ್ಟಮಾಡ ವಿಷ್ಣು, ಬೊಳ್ಳರಪಂಡ ಮಾಚು, ಬೊಳ್ಳರಪಂಡ ಬೋಪಣ್ಣ, ವಾಟೇರಿರ ಪೂವಣ್ಣ, ಕಲಿಯಂಡ ಶಾನ್, ಸುಳ್ಳಿಮಾಡ ಸುತನ್, ಮಾಚಮಾಡ ಭವಿನ್, ಅಪ್ಪೆಂಗಡ ಮಾಲೆ, ಮಾತಂಡ ಸೋಮಯ್ಯ, ಕರ್ನಂಡ ರಾಹುಲ್ ಕಾರ್ಯಪ್ಪ, ಮೇರಿಯಂಡ ಸಂಕೇತ್ ಪೂವಯ್ಯ ಹಾಜರಿದ್ದರು.

- ವರದಿ: ರವಿಕುಮಾರ್